ದೇಶಕ್ಕೆ ಕೊಡುಗೆ ಸಲ್ಲಿಸಲು ಸಿದ್ಧರಾಗಿ: ವಿದ್ಯಾಥಿರ್ಗಳಿಗೆ ಐ.ಬಿ ಬೆನಕೊಪ್ಪ ಕರೆ

02GDG08
ನಗರದ ತೋಂಟದ ಮಹಾವಿದ್ಯಾಲಯದಲ್ಲಿ ಜರುಗಿದ ಶೈಣಿಕ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ನಿಡಿ ಗೌರವಿಸಲಾಯಿತು. ಐ.ಬಿ. ಬೆನಕೊಪ್ಪ. ಎಸ್​.ಎಸ್​. ಪಟ್ಟಣಶೆಟ್ಟರ, ಅಮರೇಶ ಅಂಗಡಿ, ಎಚ್​. ಎಸ್​ ಕಿಂದ್ರಿ, ಕೆ.ಡಿ. ಮೆಣಸಿನಕಾಯಿ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ದೇಶದ ಭವಿಷ್ಯ ಯುವಶಕ್ತಿಯ ಶ್ರಮದ ಮೇಲೆ ನಿಂತಿದೆ. ವಿದ್ಯಾಥಿರ್ಗಳು ನಾವು ದೇಶಕ್ಕೆ ಸಲ್ಲಿಸಬಹುದಾದ ಕೊಡುಗೆ ಏನೆಂದು ನಿರ್ಧರಿಸಿ ಅದನ್ನು ಸಲ್ಲಿಸಲು ಸಿದ್ಧರಾಗಬೇಕು ಎಂದು ನಿವೃತ್ತ್ತ ಉಪನಿರ್ದೇಶಕ ಐ.ಬಿ ಬೆನಕೊಪ್ಪ ನುಡಿದರು.
ನಗರದ ತೋಂಟದ ಸಿದ್ಧೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಜರುಗಿದ 2023 24ನೇ ಸಾಲಿನ ಪ್ರಥಮ ವರ್ಷದ ವಿದ್ಯಾಥಿರ್ಗಳಿಗೆ ಸ್ವಾಗತ ಹಾಗೂ ಶೈಣಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಛಲ ಮತ್ತು ಜ್ಞಾನದ ಹಂಬಲವಿದ್ದಾಗ ಮಾತ್ರ ವಿದ್ಯಾಥಿರ್ಗಳು ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ. ಉಪನ್ಯಾಸಕರು ಯುವಶಕ್ತಿಯನ್ನು ಪ್ರೇರೇಪಿಸುವ ಕಾರ್ಯ ಮಾಡಬೇಕು. ಶ್ರೇಷ್ಠ ಪರಂಪರೆಯನ್ನು ಹೊಂದಿರುವ ದೇಶ ಇದಾಗಿದ್ದು, ವಿದ್ಯಾಥಿರ್ಗಳು ದೇಶಕ್ಕೆ ಭದ್ರ ಭವಿಷ್ಯದ ಅಡಿಪಾಯ ಹಾಕಬೇಕು. ಸಾಧಕರ&ದೇಶಭಕ್ತರ ಜೀವನ ಚರಿತ್ರೆಗಳಿಂದ ಸ್ಪೂತಿರ್ ಪಡೆದು ಪಾಲಕರು ಹಾಗೂ ಕಲಿತ ವಿದ್ಯಾಸಂಸ್ಥೆಯು ಹೆಮ್ಮೆ ಪಡುವಂತೆ ಸಾಧನೆ ಮಾಡಬೇಕು ಎಂದರು.
ಅಧ್ಯತೆ ವಹಿಸಿದ್ದ ಪ್ರೊ. ಎಸ್​.ಎಸ್​ ಪಟ್ಟಣಶೆಟ್ಟರ ಮಾತನಾಡಿ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜೀವನ ಸಾಧನೆಯನ್ನು ವಿದ್ಯಾಥಿರ್ಗಳಿಗೆ ತಿಳಿಸಿದರು. ತೋಂಟದ ಸಿದ್ಧೇಶ್ವರ ಮಹಾವಿದ್ಯಾಲಯದ ವಿದ್ಯಾಥಿರ್ಗಳ ಲಿತಾಂಶ ಹಾಗೂ ಶೈಣಿಕ ಸಾಧನೆಯನ್ನು ಪ್ರಶಂಶಿಸಿದರು.
ಪಿ. ಬಿ. ವಸ್ತ್ರದ ವಿದ್ಯಾಥಿರ್ಗಳಿಗೆ ಕಾಲೇಜು ಸಂಸತ್ತಿನ ಪ್ರಮಾಣ ವಚನ ಬೋಧಿಸಿ ಮಾತನಾಡಿ, ಮಹಾವಿದ್ಯಾಲಯದ ಸಂಸತ್ತು ಸಂವಿಧಾನ ಮಾದರಿಯಲ್ಲಿ ರಚನೆಗೊಂಡಿದ್ದು, ಎಲ್ಲ ವಿದ್ಯಾಥಿರ್ಗಳು ಉಪನ್ಯಾಸಕರ ಮಾರ್ಗದರ್ಶನವನ್ನು ಅನುಸರಿಸುವಂತೆ ತಿಳಿಸಿದರು.
ಪುರಸ್ಕಾರ:
ಕಾರ್ಯಕ್ರಮದಲ್ಲಿ ತೋಂಟದ ಸಿದ್ಧಲಿಂಗ ಶ್ರೀ ಪ್ರತಿಭಾ ಪುರಸ್ಕಾರ ವಿತರಿಸಿ ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು. ಮಾರ್ಚ 2023ರಂದು ನಡೆದ ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಾಣಿಜ್ಯ ವಿಭಾಗದ ಅಪಿರ್ತಾ ಕರಿಯಪ್ಪನವರ, ತರುನಮ್​ ಅಣ್ಣಿಗೇರಿ ಹಾಗೂ ವಿಜ್ಞಾನ ವಿಭಾಗದ ಜ್ಯೋತಿ ಸೂಡಿ, ಮಾಬೂಬಿ ಮುಲ್ಲಾ ಮತ್ತು ಸಾನಿಯಾ ಚಿತ್ರಗಾರ ಅವರಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಅಮರೇಶ ಅಂಗಡಿ, ಎಚ್​. ಎಸ್​ ಕಿಂದ್ರಿ, ಕೆ.ಡಿ. ಮೆಣಸಿನಕಾಯಿ, ವೈ. ಎಸ್​. ಮತ್ತೂರ, ರೇಷ್ಮಾ .ಎಚ್​, ಎನ್​.ವಿ ಕಡಗದ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net