"ಬಸವಣ್ಣ' ಸಾಂಸತಿಕ ನಾಯಕ: ತೋಂಟದ ಶ್ರೀ ಅಭಿನಂದನೆ

19GDG05
Published on

ಬಸವಣ್ಣ ಅವರನ್ನು ಕರ್ನಾಟಕ ಸಾಂಸತಿಕ ನಾಯಕ ಎಂದು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿರುವುದು ಅಭಿನಂದನೀಯ ಎಂದು ತೋಂಟದ ಸಿದ್ಧರಾಮ ಶ್ರೀಗಳು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ತಿಳಿಸಿರುವ ಅವರು, ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ, ಕಾಯಕ ದಾಸೋಹ ತತ್ವಗಳ ಅಡಿಯಲ್ಲಿ ಸಮೃದ್ಧ ಹಾಗೂ ಸಂತೃಪ್ತ ರಾಷ್ಟ್ರ ನಿರ್ಮಾಣದ ಕನಸು ಕಂಡಿದ್ದ, ಕಾಯಕ ಜೀವಿಗಳನ್ನು ಸಂಟಿಸಿ ಶ್ರಮ ಸಂಸತಿಗೆ ನಾಂದಿ ಹಾಡಿದ ಬಸವಣ್ಣನವರನ್ನು ಕರ್ನಾಟಕದ ಸಾಂಸತಿಕ ನಾಯಕರೆಂದು ೂಷಿಸಬೇಕೆಂಬುದು ನಾಡಿನ ಎಲ್ಲ ಮಠಾಧೀಶರು, ಪ್ರಗತಿಪರ ಚಿಂತಕರ ಹಾಗೂ ಸಮಸ್ತ ಜನಸಮುದಾಯದ ಆಶಯವಾಗಿತ್ತು. ಈ ಆಶಯಕ್ಕೆ ಮನ್ನಣೆ ನೀಡಿದ ಮುಖ್ಯಮಂತ್ರಿಗಳು ಬಸವಾದಿ ಶರಣರ ಚಿಂತನೆಗಳನ್ನು ನಾಡಿನ ಜನರ ಮನೆ ಮತ್ತು ಮನಗಳಿಗೆ ತಲುಪಿಸುವ ಯೋಜನೆಗಳನ್ನು ಹಾಕಿಕೊಳ್ಳುವುದಾಗಿ ತಿಳಿಸಿರುವುದು ನಾಡಿನ ಜನತೆಯ ಹರ್ಷಕ್ಕೆ ಕಾರಣವಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net