ಜೈನ ಮುನಿಗಳ ಹತ್ಯೆಗೆ ತೋಂಟದ ಶ್ರೀಗಳ ಖಂಡನೆ

11GDG08
Published on

ಗದಗ: ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಬಸದಿಯಲ್ಲಿ ದುಷ್ಕಮಿರ್ಗಳು ಕೊಲೆ ಮಾಡಿರುವುದನ್ನು ಡಾ. ತೋಂಟದ ಸಿದ್ಧರಾಮ ಶ್ರೀಗಳು ಬಲವಾಗಿ ಖಂಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜೀನೈಕ್ಯ ಜೈನಮುನಿಗಳಿಗೆ ಭಾವರ್ಪೂಣ ಶ್ರದ್ಧಾಸುಮನಗಳನ್ನು ಸರ್ಮಪಿಸಿದ್ದಾರೆ. ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಸಾಮಾಜಿಕ ಮತ್ತು ಧಾಮಿರ್ಕ ಸೇವಾಕಾರ್ಯದಲ್ಲಿ ತೋಡಗಿಸಿಕೊಂಡವರು. ಅಹಿಂಸಾ ತತ್ವದ ಅನುಪಮ ಪ್ರತಿಪಾದಕರಾಗಿದ್ದರು. ಜೀವನದ ಕಾಳಜಿ, ಸಮಾಜಮುಖಿ ಚಿಂತನೆಗಳಿಗೆ ಹೆಸರಾಗಿದ್ದ ಅವರ ಅಕಾಲ ಅಗಲುವಿಕೆ ನಮ್ಮ ನಾಡಿಗೆ ತುಂಬಲಾಗದ ನಷ್ಟವನ್ನುಂಟು ಮಾಡಿದೆ. ಹತ್ಯೆ ಮಾಡಿದ ದುಷ್ಕಮಿರ್ಗಳಿಗೆ ಕಠಿಣ ಶಿೆಯನ್ನು ವಿಧಿಸಬೇಕು ಎಂದು ಸರ್ಕಾರವನ್ನು ಶ್ರೀಗಳು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net