

ಸಂಡೂರು: ತಾಲೂಕಿನ ತೊಣಸಿಗೆರೆ ಗ್ರಾಮದಲ್ಲಿ ಎರಡು-ಮೂರು ದಿನಗಳಿಂದ ಕಾಣಿಸಿಕೊಂಡು ಆತಂಕ ಉಂಟು ಮಾಡಿದ್ದ ಕರಡಿ ಭಾನುವಾರ ಬೋನಿಗೆ ಬಿದ್ದಿದೆ.
ದೇವಸ್ಥಾನ ಹಾಗೂ ಕೆಲವರ ಮನೆಯಲ್ಲಿ ಎಣ್ಣೆ ಕುಡಿದು ಭಯ ಹುಟ್ಟಿಸಿತ್ತು. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಅಳವಡಿಸಿದ್ದರು.
ಭಾನುವಾರ ಸೆರೆಯಾಗಿದೆ. ಡಿಆರ್‌ಎಫ್‌ಒ ಜಡಿಯಪ್ಪ, ಮಲ್ಲೇಶ, ಹನುಮಂತಪ್ಪ, ರವಿ, ಶಿವಣ್ಣ ಇದ್ದರು.