ಟನ್ ಕಬ್ಬಿಗೆ 3500 ರೂ. ಘೋಷಿಸಿ

5 Raibag 1-web
ರೈತ ಸಂಘಟನೆ ಕಾರ್ಯಕರ್ತರು ಗ್ರೇಡ್-2 ತಹಸೀಲ್ದಾರ್ ಮಂಗಸೂಳಿ ಗೆ ಮನವಿ ಸಲ್ಲಿಸಿದರು. ಗುರುನಾಥ ಹೆಗಡೆ, ಉಪಾಧ್ಯಕ್ಷ ಶಿವಾಜಿ ಪಾಟೀಲ, ಪ್ರಕಾಶ ಪಾಟೀಲ, ಸಿದ್ದು ಹಿಡಕಲ್, ಪುಂಡಲೀಕ ಮಾನೆ, ಶ್ಯಾಮರಾವ್ ಬನಶಂಕರಿ, ಧರೆಪ್ಪಾ ಗಡ್ಡಿ, ಯಮನಪ್ಪ ಮಂಟೂರ ಇದ್ದರು.
Published on

ರಾಯಬಾಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ತಸೀಲ್ದಾರ್ ಕಚೇರಿ ಆವರಣದಲ್ಲಿ ರೈತ ಸಂಘ, ಹಸಿರು ಸೇನೆಯ ತಾಲೂಕು ಘಟಕದ ಕಾರ್ಯಕರ್ತರು ತಾಲೂಕಿನ ಗ್ರೇಡ್-2 ತಸೀಲ್ದಾರ್ ಪರಮಾನಂದ ಮಂಗಸೂಳಿಗೆ ಮನವಿ ಸಲ್ಲಿಸಿದರು. 2020-21ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಟನ್ ಕಬ್ಬಿಗೆ 3500 ರೂ. ಘೋಷಣೆ ಮಾಡಬೇಕು. ಗೋವಿನಜೋಳಕ್ಕೆ ಕೇಂದ್ರ ಸರ್ಕಾರ 1850 ರೂ. ಬೆಂಬಲ ಬೆಲೆ ಘೋಷಿಸಿ ಖರೀದಿಸಬೇಕು.2019-20ನೇ ಸಾಲಿನಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಮನೆಗಳನ್ನು ಕಳೆದುಕೊಂಡಿರುವ ನೆರೆ ಸಂತ್ರಸ್ತರಿಗೆ ಹಾನಿ ಪರಿಹಾರ ಬಂದಿಲ್ಲ. ತಕ್ಷಣ ಜಿಪಿಎಸ್ ಪರಿಶೀಲನೆ ಕೆಲಸ ಆರಂಭಿಸಬೇಕು ಎಂದು ಆಗ್ರಹಿಸಿದರು. ಹಸಿರು ಸೇನೆ ತಾಲೂಕು ಅಧ್ಯಕ್ಷ ಗುರುನಾಥ ಹೆಗಡೆ, ಉಪಾಧ್ಯಕ್ಷ ಶಿವಾಜಿ ಪಾಟೀಲ, ಪ್ರಕಾಶ ಪಾಟೀಲ, ಸಿದ್ದು ಹಿಡಕಲ್, ಪುಂಡಲೀಕ ಮಾನೆ, ಶ್ಯಾಮರಾವ್ ಬನಶಂಕರಿ, ಧರೆಪ್ಪಾ ಗಡ್ಡಿ, ಯಮನಪ್ಪ ಮಂಟೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net