ನಾಳೆ, ನಾಳಿದ್ದು ಗಾಯನ ಸ್ಪರ್ಧೆ

singing
Published on


ಅರಕಲಗೂಡು : ಮಲ್ನಾಡ್ ಸ್ಟಾರ್ ಸಿಂಗರ್ಸ್ ವತಿಯಿಂದ ಇದೇ ಮೊದಲ ಬಾರಿಗೆ ಗಾಯಕ- ಗಾಯಕಿಯರಿಗೆ ಲಿಂಬಿಂಗ್ ಆಡಿಷನ್ ಗಾಯನ ಸ್ಪರ್ಧೆಯನ್ನು ಆ.10 ಮತ್ತು 11ರಂದು ಬೆಳಗ್ಗೆ 9 ಗಂಟೆಗೆ ಮಲ್ಲಿಪಟ್ಟಣದ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಗಾಯಕ ಗಂಗಾಧರ್ ತಿಳಿಸಿದರು.


6-17 ವರ್ಷದವರೆಗಿನ ಕಿರಿಯರ ವಿಭಾಗದಲ್ಲಿ ವಿಜೇತರದವರಿಗೆ ಮೊದಲನೇ ಬಹುಮಾನವಾಗಿ 5 ಸಾವಿರ ರೂ, 2ನೇ ಬಹುಮಾನವಾಗಿ 3 ಸಾವಿರ ರೂ., 3ನೇ ಬಹುಮಾನವಾಗಿ 2 ಸಾವಿರ ರೂ., 4ನೇ ಮತ್ತು 5ನೇ ಸ್ಥಾನ ಪಡೆದವರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಈ ವಿಭಾಗಕ್ಕೆ 200 ರೂ. ಪ್ರವೇಶ ಶುಲ್ಕವಿರುತ್ತದೆ. ಹಾಗೆಯೇ 18 ವರ್ಷ ಮೇಲ್ಪಟ್ಟ ಹಿರಿಯರ ವಿಭಾಗದಲ್ಲಿ ವಿಜೇತರಿಗೆ ಮೊದಲನೇ ಬಹುಮಾನವಾಗಿ 5 ಸಾವಿರ ರೂ., 2ನೇ ಬಹುಮಾನವಾಗಿ 3 ಸಾವಿರ ರೂ., 3ನೇ ಬಹುಮಾನವಾಗಿ 2 ಸಾವಿರ ರೂ., 4ನೇ ಮತ್ತು 5ನೇ ಸ್ಥಾನ ಪಡೆದವರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಈ ವಿಭಾಗಕ್ಕೆ 300 ರೂ. ಪ್ರವೇಶ ಶುಲ್ಕವಿರಲಿದೆ ಎಂದರು.


ಸ್ಪರ್ಧಿಗಳು ಕಡ್ಡಾಯವಾಗಿ ಅಧಾರ್‌ಕಾರ್ಡ್ ತರಬೇಕು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಗೂ ಪ್ರಶಂಸನಾಪತ್ರ ನೀಡಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಭಾಗವಹಿಸುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಗಾಯಕ ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net