ಸಿದ್ದಾಪುರ: ವಿರಾಜಪೇಟೆ ಅರಣ್ಯ ವಲಯದ ಸಿದ್ದಾಪುರ ಗುಹ್ಯ, ಪಳ್ಳಕರೆ, ಕರಡಿಗೋಡು, ಬೀಟಿಕಾಡು ಪುಲಿಯೇರಿ, ಇಂಜಲಗೆರೆ, ಕಣ್ಣಂಗಾಲ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಆ.7ಮತ್ತು 8ರಂದು ಹಮ್ಮಿಕೊಳ್ಳಲಾಗಿದೆ.
ಕಾರ್ಯಾಚರಣೆ ವೇಳೆ ಸಾರ್ವಜನಿಕರು, ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರುವಂತೆ ಹಾಗೂ ತೋಟದ ಮಾಲಿಕರು ಕಾರ್ಮಿಕರಿಗೆ ರಜೆ ನೀಡುವುದರೊಂದಿಗೆ ಸಹಕಾರ ನೀಡುವಂತೆ ವಿರಾಜಪೇಟೆ ವಲಯದ ವಲಯ ಅರಣ್ಯಕಾರಿ ಶಿವರಾಂ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.