ನೃಪತುಂಗ ರಸ್ತೆಯಲ್ಲಿ ನಾಳೆ ದ್ವಿಮುಖ ಸಂಚಾರ

Nripathunga
Published on

ಬೆಂಗಳೂರು: ಭಾರತ್ ಬಂದ್ ಹಿನ್ನೆಲೆಯಲ್ಲಿ ನಗರದ ಕೆಲ ರಸ್ತೆ ಮಾರ್ಗಗಳನ್ನು ತಾತ್ಕಾಲಿಕವಾಗಿ ಮಾರ್ಪಾಡಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ. ಇದು ಮಂಗಳವಾರ ಬೆಳಗ್ಗೆ 6 ರಿಂದ 9ರ ಬೆಳಗ್ಗೆ 6 ವರೆಗೆ ಜಾರಿಯಲ್ಲಿ ಇರಲಿದೆ. ಮಂಗಳವಾರ ಬೆಳಗ್ಗೆ ಪುರಭವನದಿಂದ ರೈತರು ರ‌್ಯಾಲಿ ಹೊರಟು ಎನ್.ಆರ್. ಸ್ಕ್ವೇರ್, ಕೆ.ಜಿ. ರಸ್ತೆ, ಮೈಸೂರು ಬ್ಯಾಂಕ್ ವೃತ್ತದ ಮುಖಾಂತರ ಫ್ರೀಡಂ ಪಾರ್ಕ್‌ವರೆಗೆ ಜಾಥಾ ಮತ್ತು ಎತ್ತಿನ ಬಂಡಿಗಳಲ್ಲಿ ರ‌್ಯಾಲಿ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಕೆ.ಜಿ. ರಸ್ತೆಯಲ್ಲಿ ಸಾಗುವ ವಾಹನ ಸಂಚಾರವನ್ನು ಪೊಲೀಸ್ ಕಾರ್ನರ್ ಬಳಿ ಕೆ.ಜಿ. ರಸ್ತೆಗೆ ಎಡ ತಿರುವು ಪಡೆದುಕೊಂಡು ಸಾಗುವುದನ್ನು ನಿರ್ಬಂಧಿಸಲಾಗಿದೆ.

ಬದಲಿಗೆ ಹಲಸೂರು ಗೇಟ್ ಪೊಲೀಸ್ ಠಾಣೆ ಕಡೆಯಿಂದ ಬಂದು ಪೊಲೀಸ್ ಕಾರ್ನರ್ ಬಳಿ ಎಡ ತಿರುವು ಪಡೆದು ಕೆಜಿ ರಸ್ತೆ ಕಡೆಗೆ ಸಾಗುವ ವಾಹನಗಳು ಪೊಲೀಸ್ ಕಾರ್ನರ್‌ನಿಂದ ನೇರವಾಗಿ ನೃಪತುಂಗ ರಸ್ತೆಗೆ ಪ್ರವೇಶಿಸಿ ಕೆ.ಆರ್.ವೃತ್ತ ತಲುಪಲು ಅವಕಾಶ ಕಲ್ಪಿಸಲಾಗಿದೆ.

ನೃಪತುಂಗ ರಸ್ತೆಯಲ್ಲಿ ಜಾರಿಯಲ್ಲಿ ಇರುವ ಏಕಮುಖ ಸಂಚಾರವನ್ನು ದ್ವಿಮುಖ ಸಂಚಾರ ವ್ಯವಸ್ಥೆಗೆ ಪರಿವರ್ತಿಸಲಾಗಿದೆ. ಕೆ.ಆರ್. ವೃತ್ತದಿಂದ ಪೊಲೀಸ್ ಕಾರ್ನರ್‌ವರೆಗೆ ಮತ್ತು ಪೊಲೀಸ್ ಕಾರ್ನರ್‌ನಿಂದ ಕೆ.ಆರ್. ವೃತ್ತದವರೆಗೆ ರಸ್ತೆಯ 2 ದಿಕ್ಕಿನಲ್ಲಿ ವಾಹನ ಸಂಚಾರ ನಡೆಸಬಹುದಾಗಿ ಎಂದು ಕಮಲ್ ಪಂತ್ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net