ನಾಳೆ ನಂದೇಶ್ವರ ಹನುಮಾನ ರಥೋತ್ಸವ

17Ndr1
Published on

ನಂದೇಶ್ವರ: ಅಥಣಿ ತಾಲೂಕಿನ ಪುಣ್ಯೇತ್ರ ನಂದೇಶ್ವರ ಗ್ರಾಮದಲ್ಲಿ ಏ.19ರಂದು ಹನುಮಾನ ಹಾಗೂ ಬಸವೇಶ್ವರ ದೇವರ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ಕೃಷ್ಣಾ ನದಿ ದಂಡೆಯ ಮೇಲೆ ನಂದಿ ಹಾಗೂ ಈಶ್ವರನನ್ನು ಏಕಕಾಲಕ್ಕೆ ಸ್ಥಾಪಿಸಿದ್ದರಿಂದ ಈ ಗ್ರಾಮಕ್ಕೆ ನಂದೇಶ್ವರ ಎಂಬ ಹೆಸರು ಬಂದಿದೆ. ಹನುಮಾನ ದೇವಸ್ಥಾನವು ಜಾಗತ ಸ್ಥಳವೆಂದು ಹಾಗೂ ಸರ್ವಧಮೀರ್ಯರು ಆರಾಧಿಸುವ ಭಾವೆಕ್ಯ ಸಂಗಮವಾಗಿ ಪ್ರಸಿದ್ಧಿ ಪಡೆದಿದೆ. 6 ಅಡಿ ಎತ್ತರದ ಹನುಮಾನ ದೇವರಿಗೆ ಕೈಮುಗಿದು ಪ್ರಾರ್ಥಿಸಿದರೆ ಮನಸ್ಸಿನಲ್ಲಿ ಮಾಡಿಕೊಂಡ ಸಂಕಲ್ಪ ಸಿದಿಟಛಿಸುತ್ತವೆ. ಭಕ್ತಿಯಿಂದ ಬೇಡಿಕೊಂಡವರಿಗೆ ಸಂಜೀವಿನಿ ಪರ್ವತವನ್ನೇ ನೀಡಿದ ಹನುಮನ ಔದಾರ್ಯಕ್ಕೆ ಭಕ್ತರು ತಲೆದೂಗುತ್ತಾರೆ. ಶುಭ ಕಾರ್ಯ ನಡೆಯುವಾಗ ಮೊದಲು ದೇವರನ್ನು ಪೂಜಿಸುತ್ತಾರೆ. ತಮ್ಮ ಇಷ್ಟಾರ್ಥ ಈಡೇರಿದ ಮೇಲೆ ಶನಿವಾರ ದೇವರ ಸೇವಕರು ಹಾಗೂ ಗ್ರಾಮಸ್ಥರಿಗೆ ಊಟ ಹಾಕಿಸಿ ಹರಕೆ ತೀರಿಸುವ ರೂಢಿ ಈಗಲೂ ನಿರಂತರವಾಗಿ ಮುಂದುವರಿಯುತ್ತಿದೆ.

ಹನುಮಾನ ಹಾಗೂ ಬಸವೇಶ್ವರ ದೇವರ ರಥಗಳು ಗಂಟೆಗೂ ಅಧಿಕ ಸಮಯ ಸಂಚರಿಸಿ ಹನುಮಾನ ದೇವಸ್ಥಾನವನ್ನು ಸುತ್ತು ಹಾಕುತ್ತವೆ. ಆಗ ರಥಗಳ ಮೇಲೆ ಭಕ್ತರು ಬೆಂಡು, ಬೆತ್ತಾಸ್​, ಉತ್ತತ್ತಿ, ಹಣ್ಣು ಸಮರ್ಪಿಸುತ್ತಾರೆ. ನಿಗದಿತ ಸ್ಥಳಕ್ಕೆ ರಥಗಳು ಬಂದು ನಿಂತಾಗ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಹನುಮಾನ ದೇವರಿಗೆ ಪಲ್ಲಕ್ಕಿ ಸೇವೆ ಜರುಗುತ್ತದೆ. ನಾಟಕ ಆಯೋಜನೆ: ಗ್ರಾಮಸ್ಥರಿಂದ 18ರಂದು ರಾತ್ರಿ 9.30 ಗಂಟೆಗೆ ಹನುಮಾನ ನಾಟ್ಯಸಂದಿಂದ ಮಗ ಹೋದರೂ ಮಾಂಗಲ್ಯ ಬೇಕು ಹಾಗೂ 19ರಂದು ರಾತ್ರಿ 10 ಗಂಟೆಗೆ ಮಹರ್ಷಿ ವಾಲ್ಮೀಕಿ ನಾಟ್ಯ ಸಂದಿಂದ ಮುಖವಾಡ ಹಾಕಿದ ಮುತೆದೆ ನಾಟಕ ಪ್ರದರ್ಶನ ಆಗಲಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net