ಮೇ 14ರಂದು ಚನ್ನಮ್ಮನ ಕಿತ್ತೂರು ಸಂಪೂರ್ಣ ಬಂದ್​...

Kitturu 13 May 20
Published on

ಚನ್ನಮ್ಮ ಕಿತ್ತೂರು: ಸರ್ಕಾರಿ ವೈದ್ಯೆ ಅನ್ನಪೂರ್ಣಾ ಮೋಹನ್ ಅಂಗಡಿ ಅವರ ಮೇಲೆ ಸೋಮವಾರ ತಡರಾತ್ರಿ ಹಲ್ಲೆಗೆ ಯತ್ನಿಸಿ , ಜೀವ ಬೆದರಿಕೆ ಹಾಕಿದ್ದ ಅಬ್ದುಲ್​ ಮುಜಾವರ್​, ಸಹಚರರಾದ ಸಮೀರ ಮುಜಾವರ, ಸರ್ಫರಾಜ್​ ಮುಜಾವರ, ಸುಹೇಲ್​ ಇಮಾಮನವರ, ದಸ್ತಗೀರ್​ ಇಮಾಮನವರ್​ ಎಂಬ ಯುವಕರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

ವೈದ್ಯೆಗೆ ಜೀವಬೆದರಿಕೆ ಹಾಕಿ, ಹಲ್ಲೆಗೆ ಮುಂದಾಗಿದ್ದನ್ನು ತೀವ್ರವಾಗಿ ಖಂಡಿಸಿರುವ ಕಿತ್ತೂರು ವರ್ತಕರ ಸಂಘ ಗುರುವಾರ (ಮೇ 14)ದಂದು ಬಂದ್​ಗೆ ಕರೆನೀಡಿದೆ.

ಇಂದು ಸಭೆ ನಡೆಸಿರುವ ವರ್ತಕ ಸಂಘ, ಗುರುವಾರ ಸ್ವಯಂ ಪ್ರೇರಿತ ವ್ಯಾಪಾರ ವಹಿವಾಟು ಬಂದ್ ಮಾಡಿ ಆರೋಪಿತರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ತಹಶಿಲ್ದಾರ ಅವರಿಗೆ, ಮನವಿ ಪತ್ರ ಸಲ್ಲಿಸಲು ನಿರ್ಧಾರ ಕೈಗೊಂಡಿದೆ. ಈ ಸ್ವಯಂ ಪ್ರೇರಿತ ಬಂದ್‍ಗೆ ಖಾಸಗಿ ವೈಧ್ಯರ ಸಂಘ, ಔಷಧಿ ವ್ಯಾಪಾರಿಗಳ ಸಂಘ ಮದ್ಯಮಾರಾಟಗಾರರ ಸಂಘ ಹಾಗೂ ನ್ಯಾಯವಾದಿಗಳ ಸಂಘದಿಂದಲೂ ಬೆಂಬಲ ವ್ಯಕ್ತವಾಗಿದ್ದು ಗುರುವಾರ ಪಟ್ಟಣ ಯಾವುದೇ ವ್ಯಾಪಾರ ವಹಿವಾಟುಗಳು ಇರುವುದಿಲ್ಲ ಎಂದು ಸಂಘದ ಪಧಾಧಿಕಾರಿಗಳಾದ ಮಲ್ಲಿಕಾರ್ಜುನ ಸಾಣಿಕೊಪ್ಪ, ಹನುಮಂತ ಲಂಗೋಟಿ, ಮಲ್ಲಣ್ಣ ಸಾಣಿಕೊಪ್ಪ, ಬಸವರಾಜ ರಾಮಣ್ಣನವರ, ಸಂತೋಷ ಕಲಾಲ, ಕಿರಣ ಪಾಟೀಲ, ಸೂರಜ ಕುಪ್ಪಸಗೌಡರ ಇತರರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net