ನಾಳೆ ನಂದಿಕೇಶ್ವರ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ

Tomorrow is the Nandi Basaveshwara festival in Nandikeshwara.
ನಂದಿ ಬಸವೇಶ್ವರ
Published on

ಬಾದಾಮಿ: ತಾಲೂಕಿನ ನಂದಿಕೇಶ್ವರ ಗ್ರಾಮದ ಕ್ಷೇತ್ರ ಪಾಲಕ ಶ್ರೀ ನಂದಿ ಬಸವೇಶ್ವರನ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.30ರಂದು ಸಂಜೆ 6 ಗಂಟೆಗೆ ನಂದಿ ಬಸವೇಶ್ವರ ರಥೋತ್ಸವ ಜರುಗಲಿದೆ.

ಭಾನುವಾರ ಬೆಳಗ್ಗೆ 5.30ಕ್ಕೆ ನಂದಿ ಬಸವೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ನಡೆಯಲಿದ್ದೂ, ನಂತರ ಹನುಮಂತ ದೇವರ ದೇವಸ್ಥಾನದಿಂದ ಊರಿನ ಗುರು ಹಿರಿಯರು ಭಕ್ತರಿಂದ ಸಕಲ ವಾದ್ಯಗಳೂಂದಿಗೆ ಹುಚ್ಚಯ್ಯ ಜರುಗಲಿದೆ. ಮಧ್ಯಾಹ್ನ 3.30ಕ್ಕೆ ನೆಲವಿಗಿ ಗ್ರಾಮದ ಭಕ್ತರಿಂದ ಮೆರವಣಿಗೆ ಮುಖಾಂತರ ಸಕಲ ವಾದ್ಯಗಳೂಂದಿಗೆ ಕಳಸ ಆಗಮಿಸಲಿದೆ. ನಂತರ ಕೆಂದೊರ ಗ್ರಾಮದ ಭಕ್ತರಿಂದ ಮೆರವಣಿಗೆ ಮುಖಾಂತರ ರಥದ ಹಗ್ಗ ಆಗಮಿಸಲಿದೆ.

ಹುಬ್ಬಳ್ಳಿಯ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷ ಸದಾಶಿವ ಮಹಾಸ್ವಾಮಿಗಳು, ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ನಂದಿಕೇಶ್ವರದ ಪುಟ್ಟಯ್ಯ ಸ್ವಾಮಿಗಳು ಹಿರೇಮಠ ಅವರ ನೇತೃತ್ವದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಜರುಗುವುದು. ರಾತ್ರಿ 10.30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶ್ರೀ ಕುಮಾರೇಶ್ವರ ತರುಣ ನಾಟ್ಯ ಸಂಘ ನಂದಿಕೇಶ್ವರ ಅವರಿಂದ ನಾಟಕ ಘತ್ತರಗಿ ಭಾಗ್ಯ ದೇವತೆ ಅರ್ಥಾತ್ ಬಂಜೆ ತೊಟ್ಟಿಲು ತೂಗಿತು ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಏ.1 ರಂದು ರಾತ್ರಿ 10.30ಕ್ಕೆ ಹೆಣ್ಣು ಸಂಸಾರದ ಕಣ್ಣು ಅರ್ಥಾತ್ ಮನೆ ಬೆಳಗಿದ ಮುತೈದೆ ಎಂಬ ನಾಟಕಗಳು ಪ್ರದರ್ಶನಗೊಳ್ಳಲಿದೆ.

ನೆಲವಿಗಿ, ಕೆಂದೊರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಆಗಮಿಸಿ ಶ್ರೀ ನಂದಿ ಬಸವೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮದ ಪರವಾಗಿ ಸಂಘಟಕ ಮಲ್ಲಯ್ಯ ರಾಚಯ್ಯ ಮುಪ್ಪಿನ್ನವರ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net