ಮೃತ್ಯುಂಜಯ ಅಪ್ಪಗಳ ಸ್ಮರಣೋತ್ಸವ ನಾಳೆ

WEB LOGO
Published on

ವಿಜಯವಾಣೀ ಸುದ್ದಿಜಾಲ ಧಾರವಾಡ
ತ್ರಿವಿಧ ದಾಸೋಹಮೂರ್ತಿ ಮೃತ್ಯುಂಜಯಪ್ಪಗಳ 60ನೇ ಸ್ಮರಣೋತ್ಸವ ಸಮಾರಂಭವನ್ನು ಅ. 11ರಂದು ಬೆಳಗ್ಗೆ 11 ಗಂಟೆಗೆ ಮುರುಘಾಮಠದಲ್ಲಿ ಏರ್ಪಡಿಸಲಾಗಿದೆ.
ಚಿಕ್ಕಮಗಳೂರು ಬಸವತತ್ವ ಪೀಠದ ಡಾ. ಬಸವ ಮರಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಬೊಮ್ಮನಹಳ್ಳಿ ವಿರಕ್ತಮಠದ ಶ್ರೀ ಶಿವಯೋಗಿ ಸ್ವಾಮೀಜಿ ಪಾಲ್ಗೊಳ್ಳುವರು. ಸಂಸದ ಜಗದೀಶ ಶೆಟ್ಟರ್​ ಕಾರ್ಯಕ್ರಮ ಉದ್ಘಾಟಿಸುವರು. ವೈಶುದೀಪ ಫೌಂಡೇಶನ್​ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ.
ಡಾ. ವೀರಣ್ಣ ರಾಜೂರ ಸಂಪಾದಿಸಿದ "ಕರಣ ಹಸಿಗೆ ವ್ಯಾಖ್ಯಾನ ಸಂಪುಟ' ಲೋಕಾರ್ಪಣೆಗೊಳ್ಳಲಿದ್ದು, ಪ್ರೊ. ಸಿದ್ದಣ್ಣ ಲಂಗೋಟಿ ಗ್ರಂಥ ಪರಿಚಯಿಸುವರು. ವಿಧಾನ ಪರಿಷತ್​ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಮಲ್ಲಿಕಾರ್ಜುನ ಸಾವಕಾರ ಅತಿಥಿಗಳಾಗಿ ಆಗಮಿಸುವರು.
ಅಂದು ಬೆಳಗ್ಗೆ 8 ಗಂಟೆಗೆ ಮೃತ್ಯುಂಜಯ ಅಪ್ಪಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ ಜರುಗಲಿದ್ದು, ಶ್ರೀ ಮಠದ ಮುಖ್ಯ ಬಡಾವಣೆಯಲ್ಲಿ ಸಂಚರಿಸಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net