ನಾಳೆ ದೇವರಾಜ ಅರಸು ಜನ್ಮದಿನಾಚರಣೆ

Untitled-4
ಡಿ. ದೇವರಾಜು ಅರಸು ಜಯಂತಿ ಪೂರ್ವಭಾವಿ ಸಭೆಯಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಕಟಪೂರ್ವ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಬಯಪ ಮಾಜಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್​, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್​. ಕೃಷ್ಣಪ್ಪ ಇದ್ದರು.
Published on

ದೇವನಹಳ್ಳಿ : ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆಯನ್ನು ಆ.20ರಂದು ಬೆಳಗ್ಗೆ 10 ಗಂಟೆಗೆ ದೇವನಹಳ್ಳಿ ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಜಿಲ್ಲಾಡಳಿತದ ಜತೆ ಹಿಂದುಳಿದ ವರ್ಗಗಳ ಒಕ್ಕುಟದಿಂದ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಬಯಪ ಮಾಜಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್​ ಹೇಳಿದರು.

ಪಟ್ಟಣದಲ್ಲಿ ಪೂರ್ವಭಾವೆ ಸಭೆ ನಡೆಸಿ ಮಾತನಾಡಿದ ಅವರು, ಸಮಾರಂಭವನ್ನು ಸಚಿವ ಕೆ.ಎಚ್​. ಮುನಿಯಪ್ಪ ಅವರು ಉದ್ಘಾಟಿಸಲಿದ್ದಾರೆ. ಸಂಸದ ಡಾ.ಕೆಸುಧಾಕರ್​, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ತಹಸೀಲ್ದಾರ್​ ಎಂ.ಅನಿಲ್​, ಸಿಇಒ ಕೆ.ಎನ್​.ಅನುರಾಧ, ಶಾಸಕರಾದ ಶ್ರೀನಿವಾಸಮೂರ್ತಿ ,ಶರತ್​ ಬಚ್ಚೇಗೌಡ, ಧೀರಜ್​ ಮುನಿರಾಜು, ಮಾಜಿ ಶಾಸಕರಾದ ಜಿ.ಚಂದ್ರಣ್ಣ, ಪಿಳ್ಳಮುನಿಶಾಮಪ್ಪ, ನಿಸರ್ಗ ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ. ಡಿ.ದೇವರಾಜ ಅರಸು ಅವರ ಬಗ್ಗೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಅಂದು ದೇವರಾಜ ಅರಸುರವರ ಭಾವಚಿತ್ರವನ್ನು ಊವಿನ ಪಲ್ಲಕ್ಕಿಯನ್ನು ದೇವನಹಳ್ಳಿಯ ಪ್ರವಾಸಿ ಮಂದಿರದಿಂದ ಬೆಳಗ್ಗೆ 9 ಗಂಟೆಗೆ ದೇವರಾಜ ಅರಸು ಭವನದವರೆಗೂ ಮೆರವಣಿಗೆ ಮಾಡಲಾಗುವುದು. ನಂತರ ವೇದಿಕೆ ಕಾರ್ಯಕ್ರಮ 10 ಗಂಟೆಗೆ ಆರಂಭವಾಗಲಿದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್​. ಕೃಷ್ಣಪ್ಪ, ಹಿಂದುಳಿದ ವರ್ಗಗಳ ಒಕ್ಕೂಟ ಅಧ್ಯಕ್ಷ ಸಿ.ಮುನಿರಾಜು, ಪದಾಧಿಕಾರಿಗಳಾದ ಬಿ.ಕೆ. ನಾರಾಯಣಸ್ವಾಮಿ, ಸಿ.ಅಶ್ವತ್ಥನಾರಾಯಣ್​, ಎಸ್​.ಆರ್​. ವಿಜಯಕುಮಾರ್​, ಆಂಜಿನಪ್ಪ, ದಾಸಪ್ಪ, ರಾಮಮೂರ್ತಿ, ಹುರಳಗುರ್ಕಿ ಮಂಜುನಾಥ್​, ಗೋಪಾಲಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net