ನಾಳೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

kalim sharif
ಕಲೀಮ್ ಷರೀಫ್
Published on

ಕೊಳ್ಳೇಗಾಲ: ಸರ್ಕಾರಿ ನೌಕರರ ತಾಲೂಕು ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ.23ರಂದು ಸಂಜೆ 4 ಗಂಟೆಗೆ ಪಟ್ಟಣದಲ್ಲಿರುವ ಸರ್ಕಾರಿ ನೌಕರರ ಕಚೇರಿಯಲ್ಲಿ ನಡೆಯಲಿದೆ ಎಂದು ಸಂಘದ ಉಪಾಧ್ಯಕ್ಷ ಕಲೀಮ್ ಷರೀಫ್ ಹೇಳಿದರು.

ಸಭೆಗೆ ಸಂಘದ ಸರ್ವ ಸದಸ್ಯರು ಹಾಜರಾಗಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ನೀಡಿದರು.

ಸಂಘದ ನಿರ್ದೇಶಕ ಬಿ.ದೊರಸ್ವಾಮಿ ಮಾತನಾಡಿ, ಪತ್ತಿನ ಸಹಕಾರ ಸಂಘ 2012-13ನೇ ಸಾಲಿನಲ್ಲಿ ಆರಂಭಗೊಂಡಿತು. ಅಂದು 2 ಲಕ್ಷ ರೂ.ನೊಂದಿಗೆ 250 ರಿಂದ 300 ಸದಸ್ಯರನ್ನು ಒಳಗೊಂಡಂತೆ ಪ್ರಾರಂಭವಾದ ಸಂಘ ಇದೀಗ 10 ವರ್ಷ ಪೂರೈಸಿದೆ. ಇದೀಗ 11ನೇ ವರ್ಷದ ಸರ್ವ ಸದಸ್ಯರ ಮಹಾಸಭೆ ನಡೆಯುತ್ತಿದ್ದು, 23 ರಿಂದ 24 ಲಕ್ಷ ರೂ. ವಹಿವಾಟು ನಡೆಯುತ್ತಿದೆ. 1 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.

ಸಂಘದ ಸದಸ್ಯರಿಗೆ ಸಾಲಸೌಲಭ್ಯ ನೀಡಲಾಗುತ್ತಿದೆ. ಜತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪ್ರತಿಭಾ ಪುರಸ್ಕಾರ ಮೂಲಕ ಉತ್ತೇಜನ ನೀಡಲಾಗುತ್ತಿದೆ. ಸದ್ಯ 720 ಸದಸ್ಯರಿದ್ದು, ಎಲ್ಲರೂ ಸಭೆ ಹಾಜರಾಗಬೇಕೆಂದು ಮನವಿ ಮಾಡಿದರು. ಸಂಘದ ಕಾರ್ಯದರ್ಶಿ ಪುಟ್ಟಸಿದ್ದ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net