ನಾಳೆ ಹಜರತ್ ನೂರಶಾಹ್ ಬಾಬಾ 83ನೇ ಉರುಸ್

Tomorrow is the 83rd Urs of Hazrat Noorshah Baba.
ಹಜರತ್ ನೂರಶಾಹ್ ಬಾಬಾ
Published on

ಕಲಾದಗಿ: ಭಾವೈಕ್ಯದ ಸೂಫಿ ಸಂತ ಎಂದೇ ಹೆಸರಾಗಿರುವ ಹಜರತ್ ನೂರಶಾಹ್ ಬಾಬಾ ಅವರ 83ನೇ ಉರುಸ್ ಫೆ.22ರಂದು ನಡೆಯಲಿದೆ. ಫೆ.21ರಿಂದ 23ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಫೆ.21ರಂದು ಸಂಜೆ 7ಗಂಟೆಗೆ ಕುದುರೆ ಮೇಲೆ ಗಂಧದ ಮಹೋತ್ಸವ ಜರುಗಲಿದೆ. ಫೆ.22ರಂದು ಬೆಳಗ್ಗೆ 7 ಗಂಟೆಯಿಂದ ಉರುಸ್‌ನ ಕಾರ್ಯಕ್ರಮಗಳು ಆರಂಭವಾಗುತ್ತವೆ. ಮಧ್ಯಾಹ್ನ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ರಾತ್ರಿ 9 ಗಂಟೆಗೆ ದರ್ಗಾದ ಆವರಣದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ದೆಹಲಿಯ ವಸೀಮ್ ಸಾಬ್ರೀ ಖವ್ವಾಲ ಹಾಗೂ ಭೂಪಾಲ್‌ನ ಹಾಜಿ ಮುಕರ‌್ರಮ್ ಅಲಿ ವಾರಾಸಿ ಖವ್ವಾಲ ಅವರಿಂದ ಕವ್ವಾಲಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10 ಗಂಟೆಗೆ ಬಸ್ ನಿಲ್ದಾಣದ ಬಳಿ ಕಲೆ ಮತ್ತು ಸಾಂಸ್ಕೃತಿಕ ರಕ್ಷಣಾ ವೇದಿಕೆ ವತಿಯಿಂದ ಲಕ್ಷ್ಮೇಶ್ವರದ ಜೈ ಮಾತೃಭೂಮಿ ನಾಟ್ಯ ಸಂಘದವರು ಪ್ರಸ್ತುತಪಡಿಸುವ ಕವಿ ರೇವಣ್ಣ ಲಕ್ಷ್ಮೇಶ್ವರ ಬರೆದಿರುವ ‘ದುಡ್ಡು ದಾರಿ ಬಿಡಿಸಿತು’ ನಾಟಕ ಪ್ರದರ್ಶನ ನಡೆಯಲಿದೆ.

ಫೆ.23ರಂದು ಬೆಳಗ್ಗೆ ಜಿಯಾರತ ಕಾರ್ಯಕ್ರಮ ಜರುಗಲಿದ್ದು, ರಾತ್ರಿ 9 ಗಂಟೆಗೆ ಬಸ್ ನಿಲ್ದಾಣ ಬಳಿ ಸಾಯಿ ಮೆಲೋಡೀಸ್ ಅವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಹಜರತ್ ನೂರ ಅಲಿ ಶಾಹ ಬಾಬಾ ಟ್ರಸ್ಟ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net