ನಾಳೆ ನಾರಾಯಣ ಗುರುಗಳ ೧೭೧ನೇ ಜಯಂತಿ

narayana guru jayanthi
Published on

ಮಡಿಕೇರಿ: ಸೆ.೭ರಂದು ನಾರಾಯಣ ಗುರುಗಳ ೧೭೧ನೇ ಜಯಂತಿ ಆಚರಣೆಯು ಬ್ರಹ್ಮಶ್ರೀ ನಾರಾಯಣಗುರು ಚಾರಿಟೇಬಲ್ ಟ್ರಸ್ಟ್, ಎಸ್.ಎನ್.ಡಿ.ಪಿ ಯೋಗಂ ಶಾಖೆ, ಯೂತ್ ಕಮಿಟಿ ಮತ್ತು ಮಹಿಳಾ ಕಮಿಟಿಗಳ ಸಂಯುಕ್ತಾಶ್ರಯದಲ್ಲಿ ೭ನೇ ಹೊಸಕೋಟೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಚಾರಿಟೇಬಲ್ ಟ್ರಸ್ಟ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಟಿ.ಕೆ.ಸಾಯಿಕುಮಾರ್ ತಿಳಿಸಿದರು.

ಅಂದು ಬೆಳಗ್ಗೆ ೭ ಗಂಟೆಗೆ ಬ್ರಹ್ಮಶ್ರೀ ನಾರಾಯಣಗುರು ಚಾರಿಟೇಬಲ್ ಟ್ರಸ್ಟ್‌ನಲ್ಲಿ ಪೂಕೊಳಂ ಸ್ಪರ್ಧೆ ನಡೆಯಲಿದ್ದು, ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸೌಮ್ಯ ಉದ್ಘಾಟಿಸಲಿದ್ದಾರೆ. ೮.೩೦ ಗಂಟೆಗೆ ಎಸ್‌ಎನ್‌ಡಿಪಿ ೭ನೇ ಹೊಸಕೋಟೆ ಶಾಖೆಯ ಅಧ್ಯಕ್ಷ ಟಿ.ಬಿ.ರಾಜೇಶ್ ಧ್ವಜಾರೋಹಣ ನೆರವೇರಿಸಲಿದ್ದು, ೯ ಗಂಟೆ ನಡೆಯುವ ಗುರುಪೂಜೆಯನ್ನು ಟ್ರಸ್ಟ್‌ನ ಅಧ್ಯಕ್ಷ ಟಿ.ಕೆ.ಸಾಯಿಕುಮಾರ್ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಅಂದು ಬೆಳಗ್ಗೆ ೯.೩೦ಕ್ಕೆ ನಾರಾಯಣ ಗುರುಗಳ ಭಾವಚಿತ್ರದೊಂದಿಗೆ ಅಲಂಕೃತ ಬೆಳ್ಳಿ ರಥದಲ್ಲಿ ನಡೆಯುವ ಮೆರವಣಿಗೆಯನ್ನು ಅರಕಲಗೋಡು ವಿಧಾನ ಸಭಾಕ್ಷೇತ್ರದ ಶಾಸಕ ಎ.ಮಂಜು ಅವರು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮ ಸಂಜೆ ೬ ಗಂಟೆಗೆ ತನ್ನ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಉದ್ಧಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಎ.ಎಸ್.ಪೊನ್ನಣ್ಣ, ಮಂತರ್‌ಗೌಡ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಎನ್‌ಡಿಪಿ ೭ನೇ ಹೊಸಕೋಟೆ ಶಾಖೆಯ ಅಧ್ಯಕ್ಷ ಟಿ.ಬಿ.ರಾಜೇಶ್, ಎಸ್‌ಎನ್‌ಡಿಪಿ ೭ನೇ ಹೊಸಕೋಟೆ ಶಾಖೆಯ ಕಾರ್ಯದರ್ಶಿ ಕೆ.ಜಿ.ಶಿವನ್, ವನಿತಾ ಕಮಿಟಿಯ ಕಾರ್ಯದರ್ಶಿ ನಿರ್ಮಲ ಪ್ರಕಾಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net