ನಾಳೆ ಪ್ರಾಣದೇವರ ಗುಡಿಯಲ್ಲಿ ರಾಮನವಮಿ

Tomorrow is Ramanavami at Pranadeva Gudi
ಶ್ರೀ ಪ್ರಸನ್ನ ಪಂಚಮುಖಿ ಪ್ರಾಣದೇವರ ಮೂರ್ತಿ
Published on

ವಿಜಯಪುರ: ಇಲ್ಲಿನ ವಿವೇಕ ನಗರದಲ್ಲಿರುವ ಶ್ರೀ ಪ್ರಸನ್ನ ಪಂಚಮುಖಿ ಪ್ರಾಣದೇವರ ಮತ್ತು ಶ್ರೀ ಚಕ್ರಾಂಕಿತ ರಾಮೇಶ್ವರ ದೇವರ ಸನ್ನಿಧಿಯ 25ನೇ ವರ್ಷದ ಹನುಮ ಜಯಂತಿ ಉತ್ಸವ ಏ. 17 ರಂದು ನಡೆಯಲಿದ್ದು, ಈ ಹಿನ್ನೆಲೆ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದು ಶ್ರೀರಾಮ ನವಮಿಯಿಂದ ಪ್ರತಿದಿನ ಸಂಜೆ 5 ರಿಂದ 6 ರವರೆಗೆ ಪಂ. ಮಧ್ವೇಶಾಚಾರ್ಯ ಜೋಶಿ (ಮುತ್ತಗಿ) ಇವರಿಂದ ರಾಮಾಯಣ ಕುರಿತ ಪ್ರವಚನ ಮತ್ತು ಪ್ರತಿದಿನ ಸಂಜೆ ಆರು ದಿನಗಳ ಕಾಲ ಭಜನಾ ಕಾರ್ಯಕ್ರಮ ಜರುಗಲಿವೆ ಎಂದು ಪ್ರಕಟಣೆಯು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net