ನಾಳೆ ಪತ್ರಿಕಾ ದಿನಾಚರಣೆ-ಪ್ರತಿಭಾ ಪುರಸ್ಕಾರ

361226773_1275554906659573_3387256100757559102_n
Published on

ಮಡಿಕೇರಿ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಶೈಕ್ಷಣಿಕ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು.೩೦ ರಂದು ನಗರದ ಪತ್ರಿಕಾ ಭವನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಚಾಲಕ ಎಚ್.ಜೆ.ರಾಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂದು ಬೆಳಿಗ್ಗೆ ೧೦.೩೦ಕ್ಕೆ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಗಾರರಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕಿ, ಸಾಹಿತಿಯೂ ಆಗಿರುವ ಡಾ.ಕವಿತಾ ರೈ ಪಾಲ್ಗೊಳ್ಳಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಮಾಜ ಸೇವಕ ಟಿ.ಆರ್.ವಾಸುದೇವ್, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಜೈರುಸ್ ಥೋಮಸ್ ಅಲೆಗ್ಸಾಂಡರ್ ಭಾಗವಹಿಸಲಿದ್ದಾರೆ.


ಗೋಣಿಕೊಪ್ಪದ ಪತ್ರಿಕಾ ಏಜೆಂಟ್ ನಂಗಾರು ಜಮುನಾ ವಸಂತ್ ಹಾಗೂ ಸೋಮವಾರಪೇಟೆಯ ಬಿ.ಪಿ.ಶಿವಕುಮಾರ್ ಅವರನ್ನು ಪತ್ರಿಕಾ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಗುವುದು.


ಪ್ರತಿಭಾ ಪುರಸ್ಕಾರದಡಿ ಸಂಘದ ಸದಸ್ಯರ ಮಕ್ಕಳಾದ ಪರಿಧಿ ಪೊನ್ನಮ್ಮ, ರಿದಾಸುಮನ್, ಆಕಾಶ್ ಚಿಟ್ಟಿಯಪ್ಪ, ಆಯುಷ್ ಕುಟ್ಟಪ್ಪ, ದೇಚಮ್ಮ ಅಯ್ಯಪ್ಪ, ಎಸ್.ಕೆ.ತ್ರಿಶಾ ಪೊನ್ನಮ್ಮ, ಕೆ.ಈಶಾನ್ವಿ, ಆರ್.ಸಮರ್ಥ್, ಕೆ.ಜಿ.ಶಿವಾನಿ, ಎನ್.ಸಾಗಾರಿಕ, ತಿಷ್ಯಾ ಪೊನ್ನೇಟಿ, ಕಾಜಲ್.ಪಿ.ಸಿ., ಹೇಮಂತ್.ಎಂ.ಎಂ, ಇಂಚರ, ರೋಶನ್, ಸಂಸ್ಕೃತಿ, ಲಕ್ಷಿತಾ, ನಿವೇದ್ ಬಾಲಾಜಿ, ಕೆ.ಎಸ್.ದೀಕ್ಷಾ, ಅನನ್ಯ.ಕೆ.ಎಸ್, ಎ.ವಿ.ಸಮೃದ್ಧಿ, ನಿಶಾನ್.ಇ.ವಿ., ಎಂ.ಕೆ.ಜೀಷ್ಮಾ, ಜಸ್ಮಿತಾ, ಕೆ.ಜೆ.ಮೋದಕ್, ಕೆ.ಎಸ್.ರೆನಿಲ್, ರಸಜ್ನ ಮಾದಪ್ಪ, ಇಂಚರ, ಚಿತ್ತಾರ ಸೇರಿದಂತೆ ಕೊಡವ ಸ್ನಾತಕೋತ್ತರದಲ್ಲಿ ಶೇ.೭೯ ಅಂಕಗಳಿಸಿದ ಸಂಘದ ಸದಸ್ಯರಾದ ಬೊಳ್ಳಜಿರ ಬಿ.ಅಯ್ಯಪ್ಪರವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net