ರಾಷ್ಟ್ರೀಯ ಸ್ವದೇಶಿ ದಿನಾಚರಣೆ ನಾಳೆ

28 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜೀವ ದಿಕ್ಷೀತ್ 56ನೇ ಜಯಂತ್ಯುತ್ಸವ ನಿಮಿತ್ತ ರಾಜೀವ ದಿಕ್ಷೀತ್ ವಿಚಾರ ವೇದಿಕೆ ವತಿಯಿಂದ ನಗರದ ನೌಕರರ ಭವನದಲ್ಲಿ ನ. 30ರಂದು ಬೆಳಗ್ಗೆ 9.30ಕ್ಕೆ ರಾಷ್ಟ್ರೀಯ ಸ್ವದೇಶಿ ದಿನಾಚರಣೆ ಹಾಗೂ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ವೇದಿಕೆ ಸಂಚಾಲಕ ಎಂ.ಡಿ. ಪಾಟೀಲ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಮನೆಗೂ ಆಯುರ್ವೇದ ಜ್ಞಾನ ಮತ್ತು ಪ್ರತಿಯೊಬ್ಬರಿಗೂ ಆರೋಗ್ಯ ಭಾಗ್ಯ ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹಿರಿಯ ವೈದ್ಯ ಹನುಮಂತ ಮಳಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಭವರಲಾಲ್ ಆರ್ಯ, ಮಂಜುನಾಥ ಬಗಾಡೆ ಭಾಗವಹಿಸಲಿದ್ದಾರೆ ಎಂದರು.
ಇಂದಿನ ಒತ್ತಡದ ಜೀವನದಿಂದ ಪ್ರತಿಯೊಬ್ಬರೂ ಆರೋಗ್ಯ ಕಳೆದುಕೊಂಡು ಸಾಕಷ್ಟು ಹಣ ವ್ಯಯಿಸುತ್ತಿದ್ದಾರೆ. ಉತ್ತಮ ಆರೋಗ್ಯಕ್ಕೆ ಆಯುರ್ವೇದ ವಿಜ್ಞಾನ ಮತ್ತು ತಂತ್ರಗಳನ್ನು ಅರಿಯಬೇಕು. ಆ ನಿಟ್ಟಿನಲ್ಲಿ ರಾಜೀವ ದಿಕ್ಷೀತ್ ವಿಚಾರ ವೇದಿಕೆ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net