ನಂ.ಗೂಡಿನಲ್ಲಿ ನಾಳೆ ಬಸವ ಜಯಂತಿ

basavannaa
Published on


ಮೈಸೂರು : ನಂಜನಗೂಡು ನಗರದಲ್ಲಿ ಜೂ.12 ರಂದು ಅದ್ದೂರಿಯಾಗಿ ಬಸವ ಜಯಂತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಅಖಿಲ ಭಾರತ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ದೇವನೂರು ಮಹದೇವಪ್ಪ ಹೇಳಿದರು.


ನಗರದ ಗೌರಿ ಘಟ್ಟದ ಬೀದಿಯ ಬಸವನ ಗದ್ದಿಗೆಯಲ್ಲಿ ಅಂದು ಬೆಳಗ್ಗೆ 8 ಗಂಟೆಗೆ ಮಲ್ಲನಮೂಲೆ ಮಠದ ಅಧ್ಯಕ್ಷರಾದ ಶ್ರೀ ಚೆನ್ನಬಸವ ಸ್ವಾಮಿಜಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಬಸವೇಶ್ವರರ ಪುತ್ಥಳಿಯನ್ನು ನಗರದ ರಥ ಬೀದಿ, ರಾಷ್ಟ್ರಪತಿ ರಸ್ತೆ, ಮಹತ್ಮಾಗಾಂಧಿ ರಸ್ತೆಗಳ ಮೂಲಕ ಮೆರವಣಿಗೆ ಮಾಡಿ, ಜೆಎಸ್‌ಎಸ್ ಮಂಗಳ ಮಂಟಪಕ್ಕೆ ತರಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಮಧ್ಯಾಹ್ನ 1 ಗಂಟೆಗೆ ಮಂಗಳ ಮಂಟಪದಲ್ಲಿ ಧಾರ್ಮಿಕ ಸಭೆ ನಡೆಸಲಾಗುವುದು. ಸಭೆಯಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ದೇವನೂರು ಶ್ರೀ ಮಹಾಂತ ಸ್ವಾಮೀಜಿ ಹಾಗೂ ಲಾಳನಹಳ್ಳಿ ಶರಣೆ ಜಯದೇವಿ ತಾಯಿ ಭಾಗವಹಿಸಲಿದ್ದಾರೆ. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಚಿನ್ನಸ್ವಾಮಿ, ಮಂಜುಳಾ ಮಧು, ಬದನವಾಳು ಮಂಜುನಾಥ್, ಮಾಧು, ಎಂ.ಕೆ.ಬಸವಣ್ಣ, ಮುಳ್ಳೂರು ಶೇಖರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net