

ಸವದತ್ತಿ: ಜಿಲ್ಲಾ ಹೂಗಾರ, ಗುರುವ, ಜೀರ ಮತ್ತು ಪೂಜಾರ ಸಮಾಜ ಸೇವಾ ಸಂದಿಂದ ಸೆ.14ರಂದು ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಮಟ್ಟದ ಶಿವಶರಣ ಹೂಗಾರ ಮಾದಯ್ಯ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮುದಾಯದವರು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಬೇಕು ಎಂದು ತಾಲೂಕಾಧ್ಯ ಶಿವಾನಂದ ಹೂಗಾರ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮುದಾಯದ ಪ್ರಮುಖ ಬೇಡಿಕೆ ಸರ್ಕಾರಕ್ಕೆ ಸಲ್ಲಿಸಲು ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ಜಿಲ್ಲಾಧ್ಯ ಶಿವಾನಂದ ಹೂಗಾರ ಮಾತನಾಡಿ, ಎಪಿಎಂಸಿಯಿಂದ ನಗರದ ಮಾಮನಿ ಕಲ್ಯಾಣ ಮಂಟಪದವರೆಗೆ ಶರಣ ಹೂಗಾರ ಮಾದಯ್ಯ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಕಾಗವಾಡದ ಯತೀಶ್ವರಾನಂದ ಶ್ರೀ, ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್, ಶಾಸಕ ವಿಶ್ವಾಸ ವೆದ್ಯ ಸೇರಿ ಗಣ್ಯರು ಆಗಮಿಸುವರು ಎಂದರು.ಜಿಲ್ಲಾ ಉಪಾಧ್ಯ ಶಿವಲಿಂಗಪ್ರಭು ಹೂಗಾರ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಮೋಹನ ಹೂಗಾರ, ಮಾರುತಿ ಗುರವ, ಉದಯ ಹೂಗಾರ, ಬಿ.ಎಂ. ಹೂಗಾರ, ಚನ್ನಬಸಪ್ಪ ಪೂಜಾರ, ಅರ್ಜುನ ಹೂಗಾರ ಇತರರಿದ್ದರು.