ಕಾಸರಗೋಡು: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಆಶ್ರಯದಲ್ಲಿ ಕಾಸರಗೋಡು ದಸರಾ-ನೃತ್ಯೋತ್ಸವ ಅ.20ರಂದು ಮಧ್ಯಾಹ್ನ 2ರಿಂದ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಜರುಗಲಿದೆ.
ಮಧ್ಯಾಹ್ನ 2ಕ್ಕೆ ದೇವರ ನಾಮಾವಳಿ, 2.30ರಿಂದ ದಸರಾ ಸಮಾರೋಪ ಚಾಲನೆ, ನೃತ್ಯೋತ್ಸವ, ಸಂಜೆ 4ರಿಂದ ಸಭಾ ಕಾರ್ಯಕ್ರಮ ಜರುಗಲಿದ್ದು, ಡಾ.ಜಯಶ್ರೀ ನಾಗರಾಜ್ ಅಧ್ಯಕ್ಷತೆ ವಹಿಸುವರು. ವಿದ್ವಾನ್ ಕೋಲಾರ ರಮೇಶ್ ದೀಪ ಪ್ರಜ್ವಲಿಸುವರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಮಾತನಾಡುವರು. ವಿದುಷಿಯರಾದ ಅನುಪಮಾ ರಾಘವೇಂದ್ರ, ಸಿಂಧು ಭಾಸ್ಕರನ್, ಮಂಜುಳಾ ಸುಬ್ರಹ್ಮಣ್ಯ, ಸೌಮ್ಯಾ ಶ್ರೀಕಾಂತ್, ಸುಚಿತ್ರಾ, ವಿದ್ಯಾ ಮಹೇಶ್, ಭವ್ಯ ತನುಜಾಕ್ಷಾ, ಸಂಧ್ಯಾ ಮಾತಾಜಿ, ಸುಶ್ಮಿತಾ ಯತೀಶ್ ಆಚಾರ್ಯ ಭಾಗವಹಿಸುವರು. ವಕೀಲ ಸದಾನಂದ ರೈ, ರಾಮ್‌ಪ್ರಸಾದ್, ಕೃಷ್ಣ ಪ್ರಸಾದ್ ಕೋಟೆಕಣಿ, ಮೀರಾ ಕಾಮತ್ ಗೌರವ ಉಪಸ್ಥಿತರಿರುವರು.
ಇದೇ ಸಂದರ್ಭ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಅಜಿತ್ ಕೊರಕೋಡು ಅವರಿಗೆ ಗೌರವಾರ್ಪಣೆ ನಡೆಯಲಿದೆ. ‘ಗೆಜ್ಜೆ ಹೆಜ್ಜೆ’ ಸಂಸ್ಥೆಗೆ ಚಾಲನೆ ನೀಡಲಾಗುವುದು.
ಬೆಂಗಳೂರು ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿಯ ಕಲಾವಿದರಿಂದ ಕುವೆಂಪು ರಾಮಾಯಣ ದರ್ಶನ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.