10ರಂದು ಮಂಗಳೂರು ವಿವಿ ಘಟಿಕೋತ್ಸವ

mangalore-university nw
Published on

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ 39ನೇ ವಾರ್ಷಿಕ ಘಟಿಕೋತ್ಸವ ಏ.10ರಂದು ಬೆಳಗ್ಗೆ 11ಕ್ಕೆ ಕೊಣಾಜೆಯಲ್ಲಿರುವ ವಿವಿ ಕ್ಯಾಂಪಸ್‌ನ ಮಂಗಳಾ ಸಭಾಂಗಣದಲ್ಲಿ ಜರುಗಲಿದೆ. ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರು ಆನ್‌ಲೈನ್‌ನಲ್ಲಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ಈ ಬಾರಿ 117 ಮಂದಿಗೆ ಪಿಎಚ್‌ಡಿ ಪದವಿ, 10 ಮಂದಿಗೆ ಚಿನ್ನದ ಪದಕ ಮತ್ತು ವಿವಿಧ ಕೋರ್ಸ್‌ಗಳ 188 ರ‌್ಯಾಂಕ್‌ಗಳಲ್ಲಿ ಪ್ರಥಮ ರ‌್ಯಾಂಕ್ ಪಡೆದ 69 ಮಂದಿಗೆ ಪ್ರಮಾಣ ಪತ್ರ ವಿತರಣೆ ನಡೆಯಲಿದೆ. ರಾಜ್ಯಪಾಲರಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಗೌರವ ಡಾಕ್ಟರೆಟ್ ನೀಡುವ ಸಂಪ್ರದಾಯವನ್ನು ಈ ಬಾರಿ ಕೈಬಿಡಲಾಗಿದೆ. ಕೋವಿಡ್ ಮಾರ್ಗಸೂಚಿ ಮತ್ತು ಜಿಲ್ಲಾಡಳಿತದ ನಿರ್ದೇಶನದಂತೆ ಸೀಮಿತ ಸಂಖ್ಯೆಯ ಸಭಿಕರು ಮತ್ತು ಪದವೀಧರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕುಲಸಚಿವ (ಪ್ರಭಾರ)ಪ್ರೊ.ಪಿ.ಎಲ್.ಧರ್ಮ, ಹಣಕಾಸು ಅಧಿಕಾರಿ ಪ್ರೊ.ನಾರಾಯಣ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net