ಟೊಮ್ಯಾಟೊ ಕೊಂಚ ಇಳಿಕೆ, ಈರುಳ್ಳಿ ತುಟ್ಟಿ

WhatsApp Image 2024-06-26 at 6.15.16 PM
Published on


ಮೈಸೂರು:
ಮಾರುಕಟ್ಟೆಯಲ್ಲಿ ಈ ವಾರ ಟೊಮ್ಯಾಟೊ ಬೆಲೆ ಏರಿಳಿತ ಕಂಡಿದ್ದು, ಈರುಳ್ಳಿ ಸೇರಿದಂತೆ ಬಹುತೇಕ ತರಕಾರಿಗಳು ತುಟ್ಟಿ ಆಗಿವೆ.
ಮಳೆಯ ಹಿನ್ನೆಲೆಯಲ್ಲಿ ಟೊಮ್ಯಾಟೊ ಪೂರೈಕೆ ಕಡಿಮೆಯಾದ ಕಾರಣಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಏರಿದ್ದು, ಕಳೆದ ವಾರ ಪ್ರತಿ ಕೆ.ಜಿ.ಗೆ 100 ರೂ. ರವರೆಗೆ ಮಾರಾಟವಾಗಿತ್ತು.
ಒಂದೆರಡು ದಿನಗಳಿಂದ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡಿದ್ದು, ನಗರದ ಎಪಿಎಂಸಿಯಲ್ಲಿ ಸಗಟು ದರದಲ್ಲಿ ಪ್ರತಿ ಕೆ.ಜಿ.ಗೆ 45 ರೂ.ರಂತೆ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ 60 ರಿಂದ 80 ರೂ.ರವರೆಗೆ ವ್ಯಾಪಾರ ನಡೆದಿದೆ. ಸದ್ಯ ಉತ್ಪನ್ನದ ಪೂರೈಕೆ ಹೆಚ್ಚುತ್ತಿದ್ದು, ಬೆಲೆ ಇನ್ನಷ್ಟು ಇಳಿಯಬಹುದು ಎನ್ನುತ್ತಾರೆ ವರ್ತಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net