ಫಾಸ್ಟ್​ಟ್ಯಾಗ್​ ವಿಚಾರಕ್ಕೆ ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ

toll
Published on

ಆನೇಕಲ್: ಅತ್ತಿಬೆಲೆ ರಾಷ್ಟ್ರೀಯ ಹೆದ್ದಾರಿ 7ರ ಟೋಲ್ ಬಳಿ ಫಾಸ್ಟ್​ಟ್ಯಾಗ್​ ವಿಚಾರವಾಗಿ ವಾಹನ ಚಾಲಕನ ಮೇಲೆ ಟೋಲ್ ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪಟ್ಟಣ ನಿವಾಸಿ ಜಗದೀಶ್ ಗಾಯಗೊಂಡಿದ್ದು, ಟೋಲ್​ನ 7 ಸಿಬ್ಬಂದಿಯನ್ನು ಅತ್ತಿಬೆಲೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಹೊಸೂರು ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವಾಹನ ಟೋಲ್ ಹಾದು ಹೋಗುವಾಗ ಫಾಸ್ಟಾ್ಯಗ್ ರೀಡ್ ಆಗಿಲ್ಲ. ಹಣ ಪಾವತಿಸುವಂತೆ ಟೋಲ್ ಸಿಬ್ಬಂದಿ ಸೂಚಿಸಿದ್ದಾರೆ. ಫಾಸ್ಟ್​ಟ್ಯಾಗ್​ ಹೊಂದಿರುವುದರಿಂದ ಹಣ ಕಟ್ಟುವುದಿಲ್ಲ ಎಂದು ಚಾಲಕ ಹಠ ಹಿಡಿದಿದ್ದಾನೆ. ಈ ವೇಳೆ ವಾಗ್ವಾದ ನಡೆದು ಚಾಲಕನ ಕೆನ್ನೆಗೆ ಟೋಲ್​ನ ಮಹಿಳಾ ಸಿಬ್ಬಂದಿ ಬಾರಿಸಿದ್ದಾರೆ ಎನ್ನಲಾಗಿದೆ. ಇತರ ಸಿಬ್ಬಂದಿ ಪೈಪ್ ಮತ್ತು ಕಬ್ಬಿಣದ ರಾಡ್​ಗಳಿಂದ ಥಳಿಸಿದ್ದಾರೆ. ಜಗಳ ಬಿಡಿಸಲು ಬಂದ ಚಾಲಕನ ಸ್ನೇಹಿತನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಅತ್ತಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net