ಇಂದಿನಿಂದ ಟೋಲ್​ ದರ ಹೆಚ್ಚಳ

Untitled-3
ನೆಲಮಂಗಲ ತಾಲೂಕಿನ ದೊಡ್ಡಕರೇನಹಳ್ಳಿ ಗ್ರಾಮದ ಬೆಂಗಳೂರು& ಹಾಸನ ರಾಷ್ಟಿ$ಯ ಹೆದ್ದಾರಿ 75ರ ದೇವಿಹಳ್ಳಿ ಎಕ್ಸೆ$್ಪ$ಸ್​ ಪ್ರೈವೇಟ್​ ಲಿಮಿಟೆಡ್​ನ ಟೋಲ್​ ಭಾವಚಿತ್ರ.
Published on

ನೆಲಮಂಗಲ : ಬೆಂಗಳೂರು& ಹಾಸನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೆ.1ರಿಂದ ಟೋಲ್​ದರ ಹೆಚ್ಚಳ ಮಾಡಿದೆ. ತಾಲೂಕಿನ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕರೇನಹಳ್ಳಿಯ ಬೆಂಗಳೂರು& ಹಾಸನ ರಾಷ್ಟಿ$ಯ ಹೆದ್ದಾರಿ 75ರ ದೇವಿಹಳ್ಳಿ ಎಕ್ಸ್​ಪ್ರೆಸ್​ಪೆವೇಟ್​ ಲಿಮಿಟೆಡ್​ನ ಟೋಲ್​ನಲ್ಲಿ ಸಂಚರಿಸುವವರಿಗೆ ಸೆ.01ರಿಂದ ಏಕಮುಖ ಸಂಚಾರಕ್ಕೆ 5 ರೂ. ಹಾಗೂ ದ್ವಿಮುಖ ಸಂಚಾರಕ್ಕೆ 10 ರೂ. ದರ ಏರಿಕೆ ಮಾಡಲಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ, ತೈಲಬೆಲೆ ಏರಿಕೆ ನಡುವೆ ಟೋಲ್​ದರ ಏರಿಕೆ ಮಾಡಿದ್ದು, ವಾಹನ ಮಾಲೀಕರಿಗೆ ಭಾರಿ ನಷ್ಟವಾಗುತ್ತದೆ. ಹೆದ್ದಾರಿ ಪ್ರಾಧಿಕಾರ ಹಾಗೂ ಸರ್ಕಾರ ವಾಹನ ಮಾಲೀಕರು ಹಾಗೂ ಸವಾರರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಏಕಾಏಕಿ ಟೋಲ್​ದರ ಹೆಚ್ಚಳ ಮಾಡಿದರೆ ನಾವು ದುಡಿದ ಹಣ ಡೀಸೆಲ್​, ಟೋಲ್​ ಕಟ್ಟಲು ಸಾಕಾಗುತ್ತದೆ. ನಮ್ಮನ್ನು ನಂಬಿಕೊಂಡು ಕುಟುಂಬದವರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಬೇಕಾಗುತ್ತದೆ ಎಂದು ವಾಹನ ಮಾಲೀಕರೊಬ್ಬರು ಆಕ್ರೋಶ ವ್ಯಕ್ತ ಪಡಿಸಿದರು.

ಟೋಲ್​ ದರ ಹೆಚ್ಚಳ ಮಾಹಿತಿ : ಖಾಸಗಿ ಶಾಲಾ ವಾಹನ, ಕ್ಯಾಂಟರ್​ ಸೇರಿ ಲು ವಾಣಿಜ್ಯ ಹಾಗೂ ಸರಕು ಮೋಟಾರ್​ (ಎಲ್​ಸಿವಿ) ವಾಹನಗಳಿಗೆ ಮೊದಲಿದ್ದ ದರವೇ ಇರಲಿದೆ. ಫಾಸ್ಟ್​ಟ್ಯಾಗ್​ ಇದ್ದರೆ ಕಾರು ಒಳಗೊಂಡಂತೆ ಲು ವಾಹನಕ್ಕೆ ಏಕಮುಖ ಸಂಚಾರಕ್ಕೆ ಈಗಿನ ದರ 55 ರೂ. ಇದ್ದು, ಸೆ.1ರಿಂದ 60 ರೂ. ಆಗಲಿದೆ. ಜತೆಗೆ ಫಾಸ್ಟ್​ಟ್ಯಾಗ್​ ಇಲ್ಲದ ವಾಹನಗಳಿಗೆ 110 ರೂ. ಇದ್ದು, ಈ ದರ 120 ರೂ. ಆಗಲಿದೆ. ಜತೆಗೆ ಲಾರಿ, ಖಾಸಗಿ ಬಸ್​ ಒಳಗೊಂಡ ಭಾರಿ ಗಾತ್ರದ ವಾಣಿಜ್ಯ ಹಾಗೂ ಸರಕು ವಾಹನಗಳಿಗೂ ಫಾಸ್ಟ್​ಟ್ಯಾಗ್​ ಇದ್ದರೆ ಈಗಿನ ಸಂಚಾರಕ್ಕೆ 200 ರೂ. ಇದ್ದು, 205 ರೂ. ಆಗಲಿದೆ. ಫಾಸ್ಟ್​ಟ್ಯಾಗ್​ ರಹಿತ ವಾಹನಗಳಿಗೆ 400 ರೂ. ಇದ್ದು, ಇಂದಿನಿಂದ 410 ರೂ. ಆಗಲಿದೆ ಎಂದು ಟೋಲ್​ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ವಾಹನ ಸವಾರರ ಒತ್ತಾಯ : ಹೆದ್ದಾರಿಯಲ್ಲಿ ಸರಿಯಾದ ರೀತಿ ಸುರಕ್ಷತೆ, ಶೌಚಗೃಹ, ಕೆಲವೆಡೆ ರಸ್ತೆ ದುರಸ್ತಿ, ಬೀದಿ ದೀಪ ನಿರ್ವಹಣೆ ಸೇರಿ ಹೆದ್ದಾರಿಯಲ್ಲಿ ಅಗತ್ಯ ಸೌಕರ್ಯಗಳಿಲ್ಲ. ಟೋಲ್​ ದರ ಹೆಚ್ಚಳ ಮಾಡುವ ಮುನ್ನ ಸಮಸ್ಯೆ ಬಗೆ ಹರಿಸಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net