ಕಗ್ಗತ್ತಲಲ್ಲಿ ಟೋಲ್ ಪ್ಲಾಜಾ!: ಬ್ರಹ್ಮರಕೂಟ್ಲಿನಲ್ಲಿ ಸಮಸ್ಯೆ : ನಿರ್ವಹಣೆಯಲ್ಲಿ ಗುತ್ತಿಗೆ ಸಂಸ್ಥೆ ವಿಫಲ

New Project (2)
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ಕತ್ತಲಲ್ಲಿ ಮುಳುಗಿದೆ. ರಾತ್ರಿ ವೇಳೆ ದೂರದ ಊರುಗಳಿಂದ ಬರುವ ವಾಹನ ಸವಾರರಿಗೆ ಇಲ್ಲೊಂದು ಸುಂಕ ಸಂಗ್ರಹಣ ಕೇಂದ್ರವಿದೆ ಎನ್ನುವುದೇ ಅರಿವಿಗೆ ಬಾರದಂತಿದೆ. ಇಲ್ಲಿ ಟೋಲ್ ಸಂಗ್ರಹದ ಅವಧಿ ಮೀರಿದ್ದರೂ ಸುಂಕ ವಸೂಲಿ ನಿರಾತಂಕವಾಗಿ ನಡೆಯುತ್ತಿದೆ. ಆದರೆ ಇಲ್ಲಿ ಮೂಲ ವ್ಯವಸ್ಥೆಯಾದ ವಿದ್ಯುತ್ ಬೆಳಕು ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಟೋಲ್ ಸಂಗ್ರಹಣೆಯ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆ ವಿಫಲವಾಗಿದೆ.

ಟೋಲ್ ಪ್ಲಾಜಾದಲ್ಲಿ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆಗಾಗಿ ಮೂರು ಮರ್ಕ್ಯುರಿ, 14 ಬೀದಿದೀಪ ಅಳವಡಿಸಲಾಗಿದೆ. ಆದರೆ ಅದರಲ್ಲಿರುವ ಬೀದಿದೀಪ ಉರಿಯದೆ ಅನೇಕ ತಿಂಗಳು ಉರುಳಿದೆ. ಕೆಲವು ಬೀದಿದೀಪಗಳಲ್ಲಿ ಬಲ್ಬ್‌ಗಳಿಲ್ಲ. ಇನ್ನೂ ಕೆಲವು ಜೋತಾಡುತ್ತಿದೆ. ಹೊಸ ಕಂಬ ಅಳವಡಿಸಲು ತೋಡಿದ ಹೊಂಡದಲ್ಲಿ ಮಳೆ ನೀರು ತುಂಬಿದೆ.

ಟೋಲ್ ಸಿಬ್ಬಂದಿಗೆ ಸಮಸ್ಯೆ: ಟೋಲ್ ಪ್ಲಾಜಾದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಇಲ್ಲಿನ ಸಿಬ್ಬಂದಿಗೂ ಸಮಸ್ಯೆಯಾಗುತ್ತಿದೆ. ವೇಗದಿಂದ ಬರುವ ವಾಹನಗಳನ್ನು ತಡೆದು ಸುಂಕ ವಸೂಲಿ ಮಾಡಲು ಕಷ್ಟಪಡಬೇಕಾಗಿದೆ.

ಅವೈಜ್ಞಾನಿಕ ವ್ಯವಸ್ಥೆ

ಬ್ರಹ್ಮರಕೂಟ್ಲುವಿನಲ್ಲಿರುವ ಅವೈಜ್ಞಾನಿಕ ಟೋಲ್ ಗೇಟ್ ಬೇರೆಲ್ಲೂ ಇರಲು ಸಾಧ್ಯವಿಲ್ಲ. ಬೇರೆಲ್ಲಾ ಟೋಲ್ ಸಂಗ್ರಹಣ ಕೇಂದ್ರದ ಬಳಿ ವಿಸ್ತಾರವಾದ ಜಾಗವಿರುತ್ತದೆ. ದೂರದಿಂದ ಟೋಲ್ ಸಂಗ್ರಹಣ ಕೇಂದ್ರ ವಾಹನ ಚಾಲಕರಿಗೆ ಕಾಣಿಸುತ್ತದೆ. ಆದರೆ ಇಲ್ಲಿನ ಟೋಲ್ ಪ್ಲಾಝಾ ಇಕ್ಕಟ್ಟಾದ ಸ್ಥಳದಲ್ಲಿದೆ. ಬಿ.ಸಿ.ರೋಡು, ಸುರತ್ಕಲ್ ರಸ್ತೆ ಚತುಷ್ಪಥ ಹೆದ್ದಾರಿಯಾಗಿದ್ದರೂ ಟೋಲ್‌ಗೇಟ್ ಮುಂಭಾಗ ಅಂದರೆ ಬ್ರಹ್ಮರಗುಡಿ ಬಳಿ ದ್ವಿಪಥ ರಸ್ತೆ ಮಾತ್ರ ಇದೆ. ಹೆದ್ದಾರಿ ಬದಿಯಲ್ಲಿ ಶೌಚಗೃಹ ವ್ಯವಸ್ಥೆ ಇಲ್ಲ. ಈಗ ಸರ್ವೀಸ್ ರಸ್ತೆ ಬಳಿ ನಿರ್ಮಾಣವಾಗಿರುವ ಶೌಚಗೃಹ ಹೆದ್ದಾರಿಯಲ್ಲಿ ಪ್ರಯಾಣ ಮಾಡುವವರಿಗೆ ಪ್ರಯೋಜನಕ್ಕಿಲ್ಲ. ಟೋಲ್‌ಗೇಟ್ ಪಕ್ಕದಲ್ಲೇ ಟೋಲ್ ತಪ್ಪಿಸಿ ಹೋಗಲು ಸರ್ವೀಸ್ ರಸ್ತೆಯ ವ್ಯವಸ್ಥೆ ಇಲ್ಲಿದೆ!.

ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದ ಬಳಿ ಮೂಲ ಸೌಕರ್ಯದ ಕೊರತೆ ಇದೆ. ಟೋಲ್‌ಗೇಟ್ ಬಳಿಯಿಂದ ಒಂದು ಕಿಲೋ ಮೀಟರ್ ದೂರದಿಂದಲೇ ವಿದ್ಯುತ್ ಬೆಳಕಿನ ವ್ಯವಸ್ಥೆ ಬೇಕಾಗುತ್ತದೆ. ಆದರೆ ಇಲ್ಲಿ ಟೋಲ್‌ಗೇಟ್ ಬಳಿ ಕತ್ತಲು ಆವರಿಸಿದೆ. ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಜಿಪಂ ಮಾಜಿ ಸದಸ್ಯ ಬ್ರಹ್ಮರಕೂಟ್ಲು ಸುಂಕ ಕೇಂದ್ರ ಅವ್ಯವಸ್ಥೆಯಿಂದ ಕೂಡಿದೆ. ಟೋಲ್ ಸಂಗ್ರಹಿಸುವ ಜಾಗದಲ್ಲೇ ಹೊಂಡ ತುಂಬಿಕೊಂಡಿದೆ. ಅವೈಜ್ಞಾನಿಕ ರೀತಿಯಲ್ಲಿ ಅರೆಬರೆ ಹಂಪ್‌ಗಳನ್ನು ಅಳವಡಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಇರಿಸುವುದರಿಂದ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಪ್ರವೀಣ್ ಕುಮಾರ್, ಫರಂಗಿಪೇಟೆ https://www.vijayavani.net/mla-23 https://www.vijayavani.net/harassment-2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net