

ಎನ್.ಆರ್.ಪುರ: ಶೌಚಗೃಹಗಳು ಗ್ರಾಮಗಳ ಗೌರವದ ಪ್ರತೀಕವಾಗಿದ್ದು, ಎಲ್ಲರೂ ಶೌಚಗೃಹಗಳನ್ನು ಬಳಸಿಕೊಂಡು ಸ್ವಚ್ಛತೆ ಕಾಪಾಡಬೇಕು ಎಂದು ಕಡಹಿನಬೈಲು ಗ್ರಾಪಂ ಸದಸ್ಯ ಎ.ಬಿ.ಮಂಜುನಾಥ್ ಹೇಳಿದರು.
ಕಡಹಿನಬೈಲು ಗ್ರಾಮದಲ್ಲಿ ನಿರ್ಮಾಣವಾದ ನೂತನ ಶೌಚಗೃಹ ಉದ್ಘಾಟಿಸಿ ಮಾತನಾಡಿದ ಅವರು, ಶಾಸಕರು ತಾಪಂ ಅನುದಾನದಲ್ಲಿ ಶೆಟ್ಟಿಕೊಪ್ಪಕ್ಕೆ ಅಗತ್ಯವಾಗಿದ್ದ ಶೌಚಗೃಹ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಶೌಚಗೃಹ ಉದ್ಘಾಟಿಸಿ ಮಾತನಾಡಿ, ಗ್ರಾಮಸ್ಥರು ಶೌಚಗೃಹವನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು.ಅಂಚೆ ಕಚೇರಿ, ಗ್ರಂಥಾಲಯ, ಬಸ್‌ನಿಲ್ದಾಣ ಇರುವ ಸೂಕ್ತ ಕಡೆಗಳಲ್ಲಿ ಶೌಚಗೃಹ ನಿರ್ಮಾಣ ಮಾಡಲಾಗಿದೆ ಎಂದರು.
ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರ್‌ಬೈಲ್‌ನಟರಾಜ್, ಸದಸ್ಯರಾದ ಚಂದ್ರಶೇಖರ್, ಅಶ್ವಿನಿ, ವಾಣಿ ನರೇಂದ್ರ, ಚಂದ್ರಶೇಖರ್, ಲಿಲ್ಲಿ, ಪೂರ್ಣಿಮಾ, ಮುಖಂಡರಾದ ಎನ್.ಎಂ.ಕಾಂತರಾಜ್, ಮಳಲಿಶ್ರೀನಿವಾಸ್, ಕರುಗುಂದ ನಂದೀಶ್, ಪಿಡಿಒ ವಿಂದ್ಯಾ ಇದ್ದರು.