ಬಸ್ ನಿಲ್ದಾಣದೊಳಕ್ಕೆ ಶೌಚಗೃಹ ನೀರು

ಬಸ್ ನಿಲ್ದಾಣದೊಳಕ್ಕೆ ಶೌಚಗೃಹ ನೀರು
Published on

ಬೇಲೂರು: ಇಲ್ಲಿನ ಸಾರಿಗೆ ಬಸ್ ನಿಲ್ದಾಣದ ಶೌಚಗೃಹದ ಮಲಿನ ನೀರು ಬಸ್ ನಿಲ್ದಾಣದ ಪ್ರವೇಶ ದ್ವಾರದ ನಡುವೆ ಹರಿಯುತ್ತಿರುವುದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ಪ್ರಯಾಣಿಕರು ಬಸ್ ನಿಲ್ದಾಣದೊಳಗೆ ಬರುವಾಗ ಮಲೀನ ನೀರನ್ನೇ ತುಳಿದುಕೊಂಡು ತೆರಳುವ ಪರಸ್ಥಿತಿ ಎದುರಾಗಿದೆ. ಕೇವಲ ಮಲೀನ ಹರಿಯುವುದು ಮಾತ್ರವಲ್ಲದೆ ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಇದರ ಮಧ್ಯೆಯೇ ಓಡಾಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಬೇಲೂರು ಸಾರಿಗೆ ಬಸ್ ನಿಲ್ದಾಣಕ್ಕೆ ನಿತ್ಯ ಸಾವಿರಾರು ಜನರು ಆಗಮಿಸುತ್ತಿದ್ದು, ಅಷ್ಟು ಜನರು ಕಿರಿಕಿರಿ ಮಧ್ಯೆಯೇ ಓಡಾಡುತ್ತಿದ್ದಾರೆ. ಸಂಬಂಧಪಟ್ಟವರು ನಿರ್ಲಕ್ಷೃ ಬಿಟ್ಟು ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net