ಶೌಚಗೃಹ ಜಾಗ ಅಕ್ರಮ ತೆರವುಗೊಳಿಸಿ

toilet problem koppal halebandi harlapura women protest
ಕೊಪ್ಪಳ ತಾಲೂಕಿನ ಹಳೇಬಂಡಿ ಹರ್ಲಾಪುರದಲ್ಲಿ ಶೌಚಗೃಹ ಜಾಗ ಅಕ್ರಮ ತೆರವಿಗೆ ಆಗ್ರಹಿಸಿ ಮಹಿಳೆಯರು ಗುರುವಾರ ಎಡಿಸಿ ಸಾವಿತ್ರಿ ಕಡಿಗೆ ಮನಿವಿ ಸಲ್ಲಿಸಿದರು. ಪ್ರಮುಖರಾದ ಡಿ.ಎಚ್.ಪೂಜಾರ, ಮಹಾಲಕ್ಷ್ಮೀ ಕಂದಾರಿ, ನಿವಾಸಿಗಳಾದ ರೇಣುಕಾ, ಲಕ್ಷ್ಮೀ, ಶಿವಮ್ಮ, ಸಹೇರಾ ಬೇಗಂ, ಸೋನಿ, ಶಿಲ್ಪಾ ಇದ್ದರು.
Published on

ಕೊಪ್ಪಳ: ತಾಲೂಕಿನ ಹಳೇಬಂಡಿ ಹರ್ಲಾಪುರ ಗ್ರಾಮದ ೪ನೇ ವಾರ್ಡ್‌ನಲ್ಲಿನ ಶೌಚಗೃಹ ಜಾಗ ಪ್ರಭಾವಿಗಳು ಅತಿಕ್ರಮಿಸಿಕೊಂಡಿದ್ದು ತೆರವು ಮಾಡುವಂತೆ ಒತ್ತಾಯಿಸಿ ಮಹಿಳೆಯರು ಗುರುವಾರ ಡಿಸಿ, ಎಸ್ಪಿ ಹಾಗೂ ತಾಪಂ ಇಒಗೆ ಪ್ರತ್ಯೇಕ ಮನವಿ ಸಲ್ಲಿಸಿದರು.

ಗ್ರಾದಮದಲ್ಲಿ ೧೯೮೭ರಿಂದ ಬಯಲಿಗೆ ತೆರಳಲು ನಾವೆಲ್ಲ ಒಂದೇ ಜಾಗ ಬಳಸುತ್ತಿದ್ದೇವೆ. ಗ್ರಾಮದ ಚಿನ್ನತಿಮ್ಮಯ್ಯ ಎಂಬುವರಿಗೆ ಸೇರಿದ ಜಾಗ ಇದಾಗಿದೆ. ನಮ್ಮ ಕಷ್ಟ ಅರಿತು ಅವರು ತಮ್ಮ ಜಾಗ ನೀಡಿದ್ದರು. ಆದರೆ, ಈಗ ಅದನ್ನು ಗ್ರಾಮದ ನಾಲ್ವರು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಗ್ರಾಪಂಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡರು.

ಅಕ್ರಮವಾಗಿ ನೋಂದಣಿ ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳು ಮೌನವಹಿಸಿದ್ದಾರೆ. ಜಾಗ ತಮ್ಮದೆಂದು ಹೇಳಿಕೊಳ್ಳುವವರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಕ್ರಮ ತೆರವುಗೊಳಿಸಬೇಕು. ಮೂಲ ಮಾಲಿಕರ ಒಪ್ಪಿಗೆ ಪಡೆದು ಜಾಗದಲ್ಲಿ ಶೌಚಗೃಹ ನಿರ್ಮಿಸಬೇಕು. ಸಾರ್ವಜನಿಕ ಬಳಕೆಗೆ ನೀಡಬೇಕೆಂದು ಒತ್ತಾಯಿಸಿದರು. ಪ್ರಮುಖರಾದ ಡಿ.ಎಚ್.ಪೂಜಾರ, ಮಹಾಲಕ್ಷ್ಮೀ ಕಂದಾರಿ, ನಿವಾಸಿಗಳಾದ ರೇಣುಕಾ, ಲಕ್ಷ್ಮೀ, ಶಿವಮ್ಮ, ಸಹೇರಾ ಬೇಗಂ, ಸೋನಿ, ಶಿಲ್ಪಾ, ಶ್ರೀದೇವಿ ರತ್ನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net