

ಧಾರವಾಡ: ಟಾಟಾ ಮೋಟಾರ್ಸ್ ಬಾಡಿ ಸೊಲ್ಯೂಷನ್ಸ್ ಲಿ.ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಅಡಿ ತಾಲೂಕಿನ ನರೇಂದ್ರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ರೋಟರಿ ಕ್ಲಬ್ ಆಫ್ ಧಾರವಾಡ ಸೆಂಟ್ರಲ್ ಸಹಯೋಗದಲ್ಲಿ ನಿರ್ಮಿಸಿದ ಶೌಚಗೃಹವನ್ನು ಬುಧವಾರ ಉದ್ಘಾಟಿಸಲಾಯಿತು. ಕಂಪನಿಯ ಸತೀಶ ದೇಶಪಾಂಡೆ, ಬಸವರಾಜ ಗಾಣಿಗೇರ, ರೋಟರಿ ಕ್ಲಬ್ನ ಶರದ ಪೈ, ಸುನೀಲ ಬಾಗೇವಾಡಿ, ಕರಣ ದೊಡವಾಡ, ವಾಮನ ಮಂತ್ರಿ, ಡಾ. ಸತೀಶ ಇರಕಲ್, ಡಾ. ಪಲ್ಲವಿ ದೇಶಪಾಂಡೆ, ವಾಸುದೇವ ಪಾರ್ವತಿ, ಗ್ರಾಪಂ ಅಧ್ಯಕ್ಷ ನಾಗೇಶ ಹತ್ತಿಹೊಳಿ, ಇತರರು ಇದ್ದರು.