

ಕುಂದಾಪುರ: ಮರವಂತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್‌ನ ಸಿಎಸ್‌ಆರ್ ನಿಧಿಯಿಂದ ನಿರ್ಮಿಸಲಾಗಿರುವ ನೂತನ ಶೌಚಗೃಹ ಸಂಕೀರ್ಣವನ್ನು ಉದ್ಯಮಿ ಸತೀಶ್ ಎಂ.ನಾಯಕ್ ನಾಮಫಲಕ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಮರವಂತೆ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಜನಾರ್ದನ ಮರವಂತೆ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಹೆಣ್ಣುಮಕ್ಕಳ ಶೌಚಗೃಹವನ್ನು ಮರವಂತೆ ಗ್ರಾಪಂ ಅಧ್ಯಕ್ಷ ನಾಗರಾಜ ಪಟಗಾರ್ ಮತ್ತು ಗಂಡು ಮಕ್ಕಳ ಶೌಚಗೃಹವನ್ನು ಪ್ರಶಾಂತ ಬೆಳಿರಾಯ ಉದ್ಘಾಟಿಸಿದರು. ಬೈಂದೂರು ವಲಯ ಶಿಕ್ಷಣ ಸಂಯೋಜಕ ಸತ್ಯನಾರಾಯಣ ಕೊಡೇರಿ, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಂತೋಷ ಮೊಗವೀರ, ವಿದ್ಯಾರ್ಥಿ ನಾಯಕಿ ಸೌಜನ್ಯಾ, ಎಸ್‌ಡಿಎಂಸಿ ಉಪಾಧ್ಯಕ್ಷೆ ಶಾರದಾ ಪೂಜಾರಿ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಸೀತಾರಾಮ ಬಿ.ಸ್ವಾಗತಿಸಿದರು. ಶಿಕ್ಷಕಿಯರಾದ ಶಶಿಕಲಾ ಮತ್ತು ನಿರ್ಮಲಾ ಪಟಗಾರ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಶಾರದಾ ವಂದಿಸಿದರು.