ಬೀಳುವ ಸ್ಥಿತಿಯಲ್ಲಿ ಶೌಚಗೃಹ

K HALLI SHAOCHALYA PROBLEM
Published on

ಕೊಂಡ್ಲಹಳ್ಳಿ: ಸ್ವಚ್ಚಭಾರತ್ ಅಭಿಯಾನದ ಹಿನ್ನೆಲೆಯಲ್ಲಿ ಕೋನಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಣಿಮ್ಯಾಗಳಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಗೃಹಗಳನ್ನು ನಿರ್ಮಿಸಲಾಗಿದೆ.
ಶಾಲೆಯಲ್ಲಿ 25 ವಿದ್ಯಾರ್ಥಿಗಳಿದ್ದಾರೆ. ನಿರ್ಮಾಣವಾದ ಮೂರು ಶೌಚಗೃಹಗಳ ಪೈಕಿ ಒಂದು ಕೊಠಡಿಗೆ ಬಾಗಿಲಿದೆ. ಉಳಿದ ಎರಡಕ್ಕೆ ಬಾಗಿಲುಗಳಿಲ್ಲ. ಕಟ್ಟಡಗಳ ಗೋಡೆ, ಛಾವಣಿ ಶಿಥಿಲವಾಗಿವೆ.
ಸಿಮೆಂಟ್ ಕಳಚಿ, ಕಬ್ಬಿಣದ ಸರಳುಗಳು ಹೊರಬಂದಿವೆ. ಅವು ಕೂಡ ತುಕ್ಕು ಹಿಡಿದಿವೆ. ಯಾವಾಗ ಬೇಕಾದರೂ ಛಾವಣಿ ಕುಸಿದು ಬೀಳುವ ಸ್ಥಿತಿಯಲ್ಲಿವೆ. ಅಪಾಯ ಸಂಭವಿಸುವ ಮುನ್ನ ದುರಸ್ತಿಗೆ ಗಮನ ಹರಿಸಬೇಕಿದೆ.

ಅನುಮತಿ: ತಾಲೂಕಿನ ಕೆಲ ಸರ್ಕಾರಿ ಶಾಲೆಗಳಲ್ಲಿ ಶೌಚಗೃಹಗಳ ಸಮಸ್ಯೆ ಇರುವುದು ನಿಜ. 80 ಶೌಚಗೃಹಗಳ ಮಂಜೂರಿಗೆ ಮನವಿ ಮಾಡಲಾಗಿತ್ತು. 45ಕ್ಕೆ ಮಾತ್ರ ಅನುಮತಿ ದೊರೆತಿದೆ. ತಾಪಂ ಅನುದಾನ ಹಾಗೂ ಶಾಸಕರ ನಿಧಿಯಡಿ 50 ಲಕ್ಷ ರೂ. ಬಳಸಿ ಶೌಚಗೃಹ ನಿರ್ಮಿಸಲಾಗುವುದು.-ಕೆ.ತಿಪ್ಪೇಸ್ವಾಮಿ, ಬಿಇಒ, ಮೊಳಕಾಲ್ಮೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net