ಮಿಸ್ಟಿಹಿಲ್ಸ್ ವತಿಯಿಂದ ಶೌಚಾಗೃಹ ಕಟ್ಟಡ ಕೊಡುಗೆ

rain
Published on

ಮಡಿಕೇರಿ: ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಸ್ಥಳೀಯ ಫೀ.ಮಾ.ಕಾರ್ಯಪ್ಪ ಕಾಲೇಜಿಗೆ ಅವಶ್ಯವಿದ್ದ ಶೌಚಾಗೃಹ ಕಟ್ಟಡವೊಂದನ್ನು ನಿರ್ಮಿಸಿ ಮಂಗಳವಾರ ಉದ್ಘಾಟಿಸಲಾಯಿತು.


ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್.ಧರ್ಮ, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ, ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಮೋದ್ ರೈ, ನಿ.ಪ್ರಾಂಶುಪಾಲ ಡಾ.ಸಿ.ಬಿ.ರಾಮಚಂದ್ರ, ಕೊಟ್ಟುಕತ್ತಿರ ಯಶೋಧ ಪ್ರಕಾಶ್, ಕುಲಸಚಿವ ಡಾ. ಸೀನಪ್ಪ ಶೌಚಾಲಯ ಕಟ್ಟಡ ಉದ್ಘಾಟಿಸಿದರು.


ಈ ಸಂದರ್ಭ ಪ್ರಾಂಶುಪಾಲ ಮೇ.ಡಾ.ರಾಘವ ಮಾತನಾಡಿ, ಮಿಸ್ಟಿಹಿಲ್ಸ್ ಕಾಲೇಜಿನ ಏಳಿಗೆಗೆ ಕೈ ಜೋಡಿಸುತ್ತಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.


ಪ್ರಮೋದ್ ರೈ ಮಾತನಾಡಿ, ಶೌಚಾಲಯವನ್ನು ರೋಟರಿ ಜಿಲ್ಲಾ ಗ್ರಾಂಟ್‌ನಿಂದ ಸುಮಾರು ರೂ. ೧.೮೧ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವುದಾಗಿ ಹೇಳಿದರು.


ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷ ಬಿ.ಜಿ.ಅನಂತ ಶಯನ, ರೋಟರಿ ಪ್ರಮುಖರಾದ ಡಿ.ಎಂ.ತಿಲಕ್, ಮಾಜಿ ಎ.ಜಿ. ರವೀಂದ್ರ ರೈ, ನಾಮಾಂಕಿತ ಅಧ್ಯಕ್ಷ ಮಧುಸೂದನ್ ಹಾಗೂ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net