

ಕುಶಾಲನಗರ:
ಹೆಬ್ಬಾಲೆಯಲ್ಲಿರುವ ಹೆಬ್ಬಾಲೆ ಪ್ರೌಢಶಾಲೆಗೆ 1988-91 ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಹಳೇ ವಿದ್ಯಾರ್ಥಿಗಳು ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 10 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಿಸಿಕೊಟ್ಟಿದ್ದು, ಉದ್ಯಮಿ ಹಾಗೂ ಶಾಲೆಯ ಹಳೇ ವಿದ್ಯಾರ್ಥಿ ನಾಪಂಡ ಮುತ್ತಪ್ಪ ಈ ಶೌಚಗೃಹ ಶುಕ್ರವಾರ ಉದ್ಘಾಟಿಸಿದರು. ನಂತರ ಮಾತಾನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯಾರ್ಜನೆ ಮಾಡಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಬದುಕಿನ ಯಶಸ್ಸಿಗೆ ಕಾರಣಿಭೂತಾವಾದ ವಿದ್ಯಾಸಂಸ್ಥೆ ಮತ್ತು ವಿದ್ಯ್ನೆ ಕಲಿಸಿದ ಗುರುಗಳನ್ನು ನೆನೆದರೆ ತಮ್ಮ ಬದುಕು ಹಸನುಗೊಳ್ಳುವುದರ ಜತೆಯಲ್ಲಿ ತಾನು ಕೈಗೊಂಡ ಕ್ಷೇತ್ರದಲ್ಲಿ ಯಶಸ್ವಿಯಾಗಿ ಸಾಗಲು ಅನುಕೂಲವಾಗುವುದು ಎಂದರು.
ಹೆಬ್ಬಾಲೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಅರುಣಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ನಾಪಂಡ ಮುದ್ದಪ್ಪ, ಹೆಬ್ಬಾಲೆ ಸಹಕಾರ ಸಂಘದ ಅಧ್ಯಕ್ಷ ಮೋಹನ್, ಬನಶಂಕರಿ ದೇವಾಲಯ ಸಮಿತಿ ಖಜಾಂಚಿ ಸೋಮಣ್ಣ, ಪ್ರೌಢಶಾಲಾ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಚಂದ್ರು, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಸವರಾಜ್ ಶೆಟ್ಟಿ ಮತ್ತಿತರರು ಇದ್ದರು.
ಇದೇ ಸಂದರ್ಭ ಹಳೆಯ ವಿದ್ಯಾರ್ಥಿಗಳಿಗಾಗಿ ವಿವಿಧ ಕ್ರೀಡಾಕೂಟಗಳು ನಡೆದವು. ಹೆಬ್ಬಾಲೆ ಪ್ರೌಢಶಾಲೆಯಲ್ಲಿ ಈ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ವನಜಾಕ್ಷಿ, ನೀಶಾ ಪಿ.ಯು. ಸಿ. ಹೆಚ್ಚು ಅಂಕಗಳನ್ನು ಗಳಿಸಿದ ಶಯಶು, ಚಂದನಾ ಅವರನ್ನು ಗೌರವಿಸಲಾಯಿತು.