ಹೆಣ್ಣಿನ ಆತ್ಮಸ್ಥೈರ್ಯ ಹೆಚ್ಚಿಸಲು ನೆರವಾಗಿ

DEC. 16, HNP., PH.2.
Published on

ಹೊಳೆನರಸೀಪುರ : ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಹೆಣ್ಣಿನ ಆತ್ಮಸ್ಥೈರ್ಯ ಹೆಚ್ಚಿಸಲು ನೆರವಾಗಬೇಕು ಎಂದು ಬೆಂಗಳೂರಿನ ಸೈನೊಫಿಸ್ಸ್ ಸಂಸ್ಥೆ ಮುಖ್ಯಸ್ಥೆ ಸಬೀನಾ ಹೇಳಿದರು. ಜೋಡಿಗುಬ್ಬಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ವಿದ್ಯಾರ್ಥಿನಿಯರ ಶೌಚಗೃಹ ಮತ್ತು ವಿಶ್ರಾಂತಿ ಕೊಠಡಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಹೆಣ್ಣುಮಕ್ಕಳು ಯಾವತ್ತೂ ಹಿಂಸೆ ಅನುಭವಿಸಬಾರದು. ಶಾಲಾ ಹಂತದಿಂದಲೂ ಅವರಿಗೆ ಬೇಕಾದ ಮೂಲ ಸೌಕರ್ಯ ಒದಗಿಸಿಕೊಟ್ಟು, ಅವರಲ್ಲಿರುವ ಶಕ್ತಿ ಮತ್ತು ಪ್ರತಿಭೆ ಬೆಳಗಲು ಸಮಾಜ ಉತ್ತೇಜನ ನೀಡಬೇಕು ಎಂದರು.
ವಿದ್ಯಾರ್ಥಿನಿಯರು ಅಂಜಿಕೆ ಮತ್ತು ಕೀಳರಿಮೆ ತೊರೆದಾಗ ಮಾತ್ರ ವ್ಯಾಸಂಗದಲ್ಲಿ ಸಾಧನೆ ಮಾಡಲು ಸಾಧ್ಯ. ಅದಕ್ಕೆ ಬೇಕಾದ ನೆರವು ನೀಡುವಲ್ಲಿ ನಮ್ಮ ಸಂಸ್ಥೆ ಮುಂದಾಗಿದೆ ಎಂದರು. ಕೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಮಾತನಾಡಿ, ಗ್ರಾಮೀಣ ಪ್ರೌಢಶಾಲೆಗಳಲ್ಲಿ ಶೌಚಗೃಹ ನಿರ್ಮಿಸಲು ಸೈನೊಫಿಸ್ಸ್ ಸಂಸ್ಥೆ ಮತ್ತು ಇಂಡಿಯಾ ಸುಧಾರ್ ಟ್ರಸ್ಟ್ ಮುಂದಾಗಿರುವುದು ಶ್ಲಾಘನೀಯ ಎಂದರು. ವಿದ್ಯಾರ್ಥಿನಿಯರ ಬಗ್ಗೆ ಸಂಸ್ಥೆ ತೋರುತ್ತಿರುವ ಕಾಳಜಿ ಮಾದರಿಯಾಗಿದೆ ಎಂದವರು ಹೇಳಿದರು.
ಇಂಡಿಯಾ ಸುಧಾರ್ ಟ್ರಸ್ಟ್ ಸದಸ್ಯರಾದ ಕಿರಣ್, ವಾಸುದೇವ, ಮುಖ್ಯ ಶಿಕ್ಷಕ ಮಧು ಕೇಶವ, ಹಡವನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವಕುಮಾರ ಆಚಾರ್, ಶಿಕ್ಷಕರಾದ ನಳಿನಾ, ದಿನೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net