

ಕೊಳ್ಳೇಗಾಲ: ಪಟ್ಟಣದ 27ನೇ ವಾರ್ಡ್‌ನ ಮುಡಿಗುಂಡ ಬಡಾವಣೆಯಲ್ಲಿ ಮಹಿಳಾ ಶೌಚಗೃಹ ನಿರ್ಮಾಣಕ್ಕೆ ಭಾನುವಾರ ನಗರಸಭೆ ಸದಸ್ಯೆ ಪುಷ್ಪಲತಾ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, 2021-22ನೇ ಸಾಲಿನ 15ನೇ ಹಣಕಾಸಿನ ಯೋಜನೆಯ ಎಸ್.ಎಫ್.ಸಿ. ಅನುದಾನದಡಿ 14 ಲಕ್ಷ ರೂ. ವೆಚ್ಚದಲ್ಲಿ ಮಹಿಳಾ ಶೌಚಗೃಹ ನಿರ್ಮಿಸಲಾಗುತ್ತಿದೆ.ಬಡಾವಣೆಯ ಜನರ ಮನವಿಗೆ ಸ್ಪಂದಿಸಿ ಮಹಿಳೆಯರಿಗಾಗಿಯೇ ಶೌಚಗೃಹ ನಿರ್ಮಿಸಲುಕಾಳಜಿವಹಿಸಲಾಗಿದೆ. ಈ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಗಮನ ಹರಿಸಲಾಗುವುದು ಎಂದರು.ನಗರಸಭೆ ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ಮುಖಂಡರಾದ ಮಹದೇವಯ್ಯ, ಬಸವಯ್ಯ, ಚನ್ನಯ್ಯ, ಬೆಣ್ಣಪ್ಪ, ರಾಚಯ್ಯ, ಪಾಪಣ್ಣಿ, ರಂಗಣ್ಣ, ಸಾಗರ್, ಗೋವಿಂದರಾಜು, ಮಹಿಳಾ ಸಂಘದ ಸದಸ್ಯರಾದ ಸಿದ್ದರಾಜಮ್ಮ, ಮಹದೇವಮ್ಮ, ಮಂಜುಳಾ, ಲಕ್ಷಮ್ಮ ಮತ್ತಿತರಿದ್ದರು.