

ಶಿರಾ : ನಾಯಕ ಸಮುದಾಯದ ಬೆಳೆವಣಿಗೆಗೆ ಎಲ್ಲರೂ ಸಂಟಿತರಾಗಿ ಒಗ್ಗಟ್ಟಿನಿಂದ ಮುನ್ನಡೆಯಬೇಕು. ನಮ್ಮ ಪೂರ್ವಿಕರ ತ್ಯಾಗವನ್ನು ನಾವೆಲ್ಲರೂ ಪ್ರತಿನಿತ್ಯ ಸ್ಮರಿಸಬೇಕಿದೆ. ವಾಲ್ಮೀಕಿಯವರ ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಜೀವನದಲ್ಲಿ ಪಾಲಿಸಬೇಕು ಎಂದು ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಹೇಳಿದರು.
ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿ, ನಾಯಕ ಸಮುದಾಯ ಸಂಟಿತರಾಗಿ ಒಗ್ಗೂಡುವ ಅವಶ್ಯಕತೆ ಇದ್ದು, ಅ.18ರಂದು ಶನಿವಾರ ಶಿರಾದಲ್ಲಿ ಆಯೋಜಿಸಿರುವ ಅದ್ದೂರಿ ವಾಲ್ಮೀಕಿ ಜಯಂತಿಯಲ್ಲಿ ಎಲ್ಲರೂ ಪಾಲ್ಗೊಂಡು ನಾಯಕ ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದರು.
ಮುಖಂಡರಾದ ಮನೋಹರ್ ನಾಯಕ, ವಿ.ನಾಗರಾಜ್, ಟಿ.ಸಿ.ದೇವರಾಜ್, ಯಜಮಾನ ನಾಗರಾಜ್, ಡಿ ರಾಮಯ್ಯ, ಕೃಷ್ಣಮೂರ್ತಿ ಪಾಂಡಪ್ಪ, ಪ್ರಸನ್ನ ಕುಮಾರ್, ಮಹೇಶ್, ಮೋಹನ್, ಲ್ಮಣ್, ರಾಜು, ಗೋಪಾಲ್, ಗ್ರಾಪಂ ಮಾಜಿ ಅಧ್ಯೆ ಸತ್ಯಭಾಮ, ರಾಮು, ಬಸವರಾಜ್ ಉಪಸ್ಥಿತರಿದ್ದರು.