ಒಗ್ಗಟ್ಟಿನಿಂದ ಸಮುದಾಯ ಅಭಿವೃದ್ಧಿ

19brg1
Published on

ಬೋರಗಾಂವ: ಜೈನ ಸಮುದಾಯ ಅಲ್ಪಸಂಖ್ಯಾತ ಸಮುದಾಯ. ದಿವಂಗತ ರಾವಸಾಹೇಬ ಪಾಟೀಲ ಅವರು ಸಮಾಜದಲ್ಲಿನ ಸಮಸ್ಯೆ ಮತ್ತು ನ್ಯೂನತೆ ನಿವಾರಿಸುವ ಮೂಲಕ ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಗೆ ಪ್ರಾಮುಖ್ಯತೆ ನೀಡಿದರು. ಸರ್ಕಾರದ ಯೋಜನೆ ಪಡೆಯಲು ಎಲ್ಲರೂ ಒಂದಾಗಬೇಕು. ಎಲ್ಲರೂ ಒಗ್ಗೂಡಿದರೆ, ಜೈನ ಸಮುದಾಯವು ಖಂಡಿತವಾಗಿಯೂ ಅಭಿವೃದ್ಧಿ ಹೊಂದುತ್ತದೆ ಎಂದು ಕರ್ನಾಟಕದ ಜೈನ ಅಸೋಸಿಯೇಶನ್ ನಿರ್ದೇಶಕ ಉತ್ತಮ ಪಾಟೀಲ ಹೇಳಿದರು.

ಸಮೀಪದ ಶಿರದವಾಡದಲ್ಲಿ ನಡೆಯುತ್ತಿರುವ ಪಂಚಕಲ್ಯಾಣ ಮಹಾಮಹೋತ್ಸವಕ್ಕೆ ಶನಿವಾರ ಭೇಟಿ ನೀಡಿ, ಸಭಾ ಮಂಟಪಕ್ಕೆ ಘೋಷಿಸಲಾದ ಆರ್ಥಿಕ ಸಹಾಯದ ಚೆಕ್ ಸಮಿತಿಗೆ ಹಸ್ತಾಂತರಿಸಿ ಮಾತನಾಡಿದರು.

ಸತ್ಯ, ನ್ಯಾಯ, ಅಹಿಂಸೆ, ತ್ಯಾಗ ಮತ್ತು ಸಂಯಮ ಎಂಬ ಐದು ರತ್ನಗಳ ಮೂಲಕ ಜೈನ ಮುನಿಗಳು ಇಡೀ ಜಗತ್ತಿಗೆ ಬದುಕು ಮತ್ತು ಬದುಕಲು ಬಿಡಿ ಎಂಬ ಸಂದೇಶ ನೀಡಿದರು. ನಮ್ಮ ಧರ್ಮದ ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ನಾವು ಶ್ರಮಿಸಬೇಕು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣವಂತರನ್ನಾಗಿ ಮಾಡಬೇಕು. ಸಮುದಾಯದ ಪ್ರತಿಯೊಂದು ಸಮಸ್ಯೆಯನ್ನು ದಕ್ಷಿಣ ಭಾರತ ಜೈನ ಸಭಾ ಮತ್ತು ವೀರ ಸೇವಾ ದಳದ ಮೂಲಕ ಪರಿಹರಿಸಲಾಗುತ್ತಿದೆ. ಅರಿಹಂತ ಉದ್ಯೋಗ ಸಮೂಹವು ಯಾವಾಗಲೂ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದರು.

ಅಕ್ಕೊಳ ಗ್ರಾಪಂ ಅಧ್ಯಕ್ಷ ಇಂದ್ರಜಿತ್ ಸೋಳಕುರೆ, ಧೋಣೆವಾಡಿ ಗ್ರಾಪಂ ಅಧ್ಯಕ್ಷೆ ಗೀತಾಂಜಲಿ ಮಾನೆ, ವೀರಸೇವಾ ದಳದ ಅಧ್ಯಕ್ಷ ಬಾಳಾಸಾಹೇಬ ಪಾಟೀಲ, ರಾಜು ಮಗದುಂ, ಅಭಯ ಮಗದುಂ, ಅಭಯ ಕರೋಲೆ, ಮನೋಜ ಪಾಟೀಲ, ಮಂಗೂರು ಗ್ರಾಪಂ ಅಧ್ಯಕ್ಷ ಸಂಜಯ ಪಾಟೀಲ, ಬಾಹುಬಲಿ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net