ತೊಗರಿಗೆ ಮಿರಿಡ್ ಕೀಟ ಕಾಟ

9telsang2
Published on

ತೆಲಸಂಗ: ಈ ಬಾರಿ ಮುಂಗಾರು ಆರಂಭದಲ್ಲೇ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರು ಸಂತಸಗೊಂಡು ತೆಲಸಂಗ ಹೋಬಳಿಯಲ್ಲಿ 12 ಹೆಕ್ಟೇರ್ ತೊಗರಿ ಬಿತ್ತನೆ ಮಾಡಿದ್ದರು. ಬಿತ್ತಿದ ಸ್ವಲ್ಪದಿನದಲ್ಲೇ ಸುರಿದ ನಿರಂತರ ಮಳೆಗೆ ಸಿಕ್ಕ ಬೆಳೆಗಳು ಸುಧಾರಣೆ ಹಂತಕ್ಕೆ ತಲುಪುತ್ತಿದ್ದವು. ಆದರೆ, ಈಗ ‘ಮಿರಿಡ್ ಬಗ್’ ತೊಗರಿ ಬೆಳೆ ಮೇಯುತ್ತಿದ್ದು ರೈತರಲ್ಲಿ ಆತಂಕ ಹೆಚ್ಚಿಸಿದೆ.

ಆರಂಭದಲ್ಲಿ ಒಂದು ಅಥವಾ ಎರಡು ಗಿಡಗಳಲ್ಲಿ ಮಾತ್ರ ಕಂಡುಬಂದ ಮಿರಿಡ್ ಕೀಟ ಕ್ರಮೇಣ ತೊಗರಿ ಗಿಡದ ತುಂಬ ಹರಡುತ್ತಿದೆ. ಮಿರಿಡ್ ಕೀಟ ತೊಗರಿ ಎಲೆ ಮತ್ತು ಮೊಗ್ಗುಗಳ ರಸ ಹೀರುವುದರಿಂದ ಗಿಡಗಳು ಒಣಗಿದಂತೆ ಕಾಣುತ್ತಿದ್ದು, ತೊಗರಿ ಮೊಗ್ಗುಗಳು ಉದುರಿ ಬೀಳುತ್ತಿವೆ.

ಪರಿಹಾರೋಪಾಯ ತಿಳಿಸಲಿ: ಮಿರಿಡ್ ಬಗ್ ಕೀಟ ನಿಯಂತ್ರಣದ ಬಗ್ಗೆ ರೈತರಿಗೆ ಮಾಹಿತಿ ಇಲ್ಲ. ಹಾಗಾಗಿ, ಕೃಷಿ ತಜ್ಞರು ಮತ್ತು ಅಧಿಕಾರಿಗಳು ತೊಂದರೆಗೊಳಗಾದ ರೈತರ ಹೊಲಕ್ಕೆ ಭೇಟಿ ನೀಡಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net