ತೊಗರಿ ಪರಿಹಾರ ಹೋರಾಟಕ್ಕೆ ಸಿದ್ಧತೆ ಸಭೆ ೨೨ರಂದು

avvanna myakheri
Published on

ಕಲಬುರಗಿ: ಜಿಲ್ಲೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಮುಂಗಾರು ಹೆಸರು, ಉದ್ದು ಸೇರಿ ಹಲವು ಬೆಳೆಗಳು ಅತಿವೃಷ್ಟಿಯಿಂದ ಬೆಳೆ ಹಾಳಾಗಿದ್ದು, ರೈತರು ಸಂಕಷ್ಟದಲ್ಲಿದ್ದು, ಪರಿಹಾರ ನೀಡಲು ಆಗ್ರಹಿಸಿ ಬೃಹತ್ ಪ್ರತಿಭಟನೆಗೆ ಉz್ದÉÃಶಿಸಿದ್ದು, ಫೆ.೨೨ರಂದು ಹೋರಾಟದ ಕುರಿತು ಚರ್ಚಿಸಲು ರೈತರ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ರೈತ ಹೋರಾಟ ಸಮಿತಿಯ ಅವ್ವಣ್ಣ ಮ್ಯಾಕೇರಿ ತಿಳಿಸಿದ್ದಾರೆ. ನಗರದ ಐವಾನ್ ಇ ಶಾಹಿ ಅತಿಥಿ ಗೃಹದ ಸಭಾಂಗಣದಲ್ಲಿ ಪ್ರತಿಭಟನೆಯ ಪೂರ್ವಭಾವಿ ಸಭೆ ಫೆ.೨೨ರಂದು ಬೆಳಗ್ಗೆ ೧೦ಗಂಟೆಗೆ ಕರೆಯಲಾಗಿದೆ. ಜಿಲ್ಲೆಯ ರೈತರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಹೋರಾಟದ ರೂಪುರೇಷೆಗಳ ಕುರಿತು ಸಲಹೆ ನೀಡಬೇಕು ಎಂದು ಕೋರಿದ್ದಾರೆ. ಮಾಹಿತಿಗೆ ಅವ್ವಣ್ಣ ಮ್ಯಾಕೇರಿ (೯೪೪೮೪೭೦೮೬೯), ದಯಾನಂದ ಪಾಟೀಲ್ (೬೩೬೪೩೪೫೮೫೦), ಮಲ್ಲಣ್ಣ ಕುಲಕರ್ಣಿ (೭೭೬೦೭೦೨೫೫೦), ಮಲ್ಲಿನಾಥ ಕೊಳ್ಳುರ (೯೯೪೫೨೦೮೧೮೮), ಗಿರೀಶ ಪಾಟೀಲï (೯೯೧೬೬೬೪೪೪೪), ಮಹೇಶ ಪಾಟೀಲ್ (೯೫೯೧೮೦೯೧೪೧) ಅವರನ್ನು ಸಂಪರ್ಕಿಸಲು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ೧೮,೯೬೩ ಹೆಕ್ಟೆರ್ ಮತ್ತು ಹಿಂಗಾರು ತೊಗರಿ ನೆಟೆರೋಗ, ಕಳಪೆ ಬೀಜ, ತೇವಾಂಶ ಕೊರತೆಯಿಂದ ೧,೮೨,೮೬೫ ಹೆಕ್ಟೆರ್ ಪ್ರದೇಶದಲ್ಲಿ ತೊಗರಿ ಬೆಳೆ ಹಾನಿ ಆಗಿದೆ. ಆದರೆ ಪರಿಹಾರ ನೀಡಬೇಕಾದ ಸರ್ಕಾರ ಮೌನ ವಹಿಸಿ, ದಿನದೂಡುತ್ತಿದೆ. ರೈತರು ಸಂಕಷ್ಟದಲ್ಲಿದ್ದು, ಬೃಹತ್ ಹೋರಾಟ ರೂಪಿಸುತ್ತಿದ್ದು, ಪೂರ್ವಭಾವಿ ಸಭೆಯಲ್ಲಿ ಹೆಚ್ಚಿನ ರೈತರು ಭಾಗವಹಿಸಿ, ಸಲಹೆ ನೀಡಿ, ಸಾಥ್ ನೀಡಬೇಕು. | ಅವ್ವಣ್ಣ ಮ್ಯಾಕೇರಿ, ಮುಖಂಡ ರೈತ ಹೋರಾಟ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net