

ಇಳಕಲ್ಲ:ಇಲ್ಲಿನ ಎಪಿಎಂಸಿ ಯಾರ್ಡ್ನಲ್ಲಿ ಪಿಕೆಪಿಎಸ್ ಬ್ಯಾಂಕಿನ 49 ನೇ ಸರ್ವಸಾಮಾನ್ಯ ಸಭೆ ಶುಕ್ರವಾರ ನಡೆಯಿತು.ಬ್ಯಾಂಕಿನ ಅಧ್ಯ ಮಹಾಂತೇಶ ಹೊಳಿ ಅಧ್ಯತೆ ವಹಿಸಿ ಮಾತನಾಡಿ, ರೈತರ ಜೀವನಾಡಿಯಾಗಿ ಅವರಿಗೆ ಅವಶ್ಯವಿರುವ ವಿವಿಧ ರೀತಿಯ ಸಾಲಗಳನ್ನು ಬ್ಯಾಂಕಿನ ವತಿಯಿಂದ ವಿತರಣೆ ಮಾಡಲಾಗುತ್ತಿದೆ. ಶ್ರೀದಲ್ಲಿ ತೊಗರಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ರೈತರ ಹಲವು ಪ್ರಶ್ನೆಗಳಿಗೆ ಮುಖ್ಯ ಕಾರ್ಯನಿರ್ವಾಹಕ ವೀರೇಶ ಹೂಗಾರ ಹಾಗೂ ನಿರ್ದೇಶಕರು ಉತ್ತರ ನೀಡಿದರು. ಸಭೆಯಲ್ಲಿ ಬ್ಯಾಂಕಿನ ಉಪಾಧ್ಯೆ ಮಲ್ಲಮ್ಮ ಹನಮನಾಳ, ನಿರ್ದೇಶಕರಾದ ಗುರು ಗಾಣಿಗೇರ, ವಿನೋದ ಬಾರಿಗಿಡದ, ಬಸವರಾಜ ಬಾದವಾಡಗಿ, ಗುದ್ಲೆಪ್ಪ ಪಲ್ಲೇದ, ಮಹೇಶ ಪಾಟೀಲ, ರವಿ ಚಿತ್ತರಗಿ, ರಾಯನಗೌಡ ಪಾಟೀಲ, ಪರಶುರಾಮ ಕತ್ತಿ, ಗೌಡಪ್ಪ ಕರಡಿ, ಅಂಬಿಕಾ ಪಾಟೀಲ ಭಾಗವಹಿಸಿದ್ದರು.
ಇಳಕಲ್ಲದ ಪಿಕೆಪಿಎಸ್ ಬ್ಯಾಂಕಿನ 49ನೇ ಸಭೆಯಲ್ಲಿ ಅಧ್ಯ ಮಹಾಂತೇಶ ಹೊಳಿ ಮಾತನಾಡಿದರು. ನಿರ್ದೇಶಕರಾದ ಗುರು ಗಾಣಿಗೇರ, ವಿನೋದ ಬಾರಿಗಿಡದ, ಬಸವರಾಜ ಬಾದವಾಡಗಿ, ಮಲ್ಲಮ್ಮ ಹನಮನಾಳ, ಅಂಬಿಕಾ ಪಾಟೀಲ ಇದ್ದರು.