

ಆಲ್ದೂರು: ಪ್ರಸ್ತುತ ಯುವ ಜನರಲ್ಲಿ ಆಹಾರದಲ್ಲಿನ ಪೌಷ್ಟಿಕಾಂಶದ ಕೊರತೆಯಿಂದ ರಕ್ತಹೀನತೆ ಹೆಚ್ಚಾಗಿ ಕೊಬ್ಬಿನಂಶದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಯುವ ಜನರ ಜೀವನ ಶೈಲಿ ಅವರ ಆರೋಗ್ಯಕ್ಕೆ ಮಾರಕವಾಗುತ್ತಿದೆ ಎಂದು ಜಿಲ್ಲಾ ಆಸ್ಪತ್ರೆ ರಕ್ತನಿಧಿ ಮುಖ್ಯಸ್ಥ ಡಾ.ಮುರುಳೀಧರ್ ಹೇಳಿದರು.
ಉದ್ದಂಡೇಶ್ವರ ಶಿಕ್ಷಣ ಸೇವಾ ಟ್ರಸ್ಟ್ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆ ವತಿಯಿಂದ ಆಲ್ದೂರು ಸಮೀಪದ ಹಂಗರವಳ್ಳಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಉಚಿತ ಕ್ಯಾನ್ಸ್‌ರ್ ತಪಾಸಣೆ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಹಿರಿಯರು 90 ವರ್ಷಗಳಾದರೂ ಸದೃಢವಾಗಿರುತ್ತಿದ್ದರು. ಔಷಧಗಳಿಂದ ದೂರ ಇರುತ್ತಿದ್ದರು.ಆದರೆ ಇಂದು ಕಾಯಿಲೆಗಳಿಗೆ ತುತ್ತಾಗುತ್ತಿರರುವವರ ಪ್ರಮಾಣ ಏರಿಕೆಯಾಗುತ್ತಿದೆ. ಮಂಕಿಾಕ್ಸ್, ಕ್ಯೂಫಿಕ್ಸ್ ಕಾಯಿಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದರು.
ಸ್ವಯಂ ರಕ್ತದಾನಿಯಿಂದ ಮಾತ್ರ ರಕ್ತ ಪಡೆಯಲಾಗುತ್ತದೆ. ಅಪಘಾತಕ್ಕೆ ಒಳಗಾದವರು, ಹಾವು ಕಚ್ಚಿದವರಿಗೂ ರಕ್ತದ ಅವಶ್ಯಕತೆ ಇದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತದ ಕಣಗಳು ನಿರ್ಮಾಣವಾಗುತ್ತವೆ. ಹೃದಯಾಘತ ಕಡಿಮೆಯಾಗುತ್ತದೆ.ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಆರೋಗ್ಯವಂತ ಪುರುಷರು ವರ್ಷಕ್ಕೆ ಮೂರು ಬಾರಿ, ಮಹಿಳೆಯರು ನಾಲ್ಕು ಬಾರಿ ರಕ್ತದಾನ ಮಾಡಬಹುದು ಎಂದರು.
ಉದ್ದಂಡೇಶ್ವರ ಶಿಕ್ಷಣ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪ್ರದೀಶ್, ಬೈಗೂರು ಗ್ರಾಪಂ ಉಪಾಧ್ಯಕ್ಷ ಸ್ಮಿತಾ ನಾಗೇಶ್, ಬೈಗೂರು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಗದೀಶ್, ಟ್ರಸ್ಟ್ ಉಪಾಧ್ಯಕ್ಷ ಗಿರೀಶ್, ಖಜಾಂಚಿ ರಾಜು, ಸಹ ಕಾರ್ಯದರ್ಶಿ ಪವಿತ್ರ ಗಣೇಶ್, ಸದಸ್ಯರಾದ ಶಶಿಧರ್, ಮಹೇಶ್, ಸಂದೇಶ್, ದಿನೇಶ್, ರುದ್ರೇಗೌಡ, ಅರುಣ್ ಕುಮಾರ್ ಇದ್ದರು.