

ಹರಪನಹಳ್ಳಿ: ಗುರುಗಳು ಹಾಗೂ ತಂದೆಯ ಋಣವನ್ನು ಸಾಧ್ಯವಾದಷ್ಟು ತೀರಿಸುವ ಕಾರ್ಯ ಮಾಡಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಸಿ ಸಿದ್ಪಪ್ಪ ತಿಳಿಸಿದರು.
ತಾಲೂಕಿನ ಬಾಗಳಿಯ ರಾಮನಗೌಡ್ರು ಹಾಲಮ್ಮ ಚನ್ನನ ಗೌಡ್ರು ಪ್ರೌಢಶಾಲೆಲ್ಲಿ ಸೋಮವಾರ ಆಯೋಜಿಸಿದ್ದ 2001-02ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿದ್ಯಾಭ್ಯಾಸ ಮುಗಿದ ನಂತರವೂ ವಿದ್ಯಾರ್ಥಿಗಳು ತಾವು ಶಿಕ್ಷಣ ಪಡೆದ ಪ್ರೌಢ ಶಾಲಾ ಶಿಕ್ಷಕರನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದೀರಿ ಎಂದರೆ ಇದು ಮಾದರಿ ಕಾರ್ಯವಾಗಿದೆ. ಇಂದಿನ ಮಕ್ಕಳಿಗೆ ಸಂಸ್ಕಾರದ ಕೊರತೆಯಿದೆ. ಶಿಕ್ಷಣ ಪದ್ಧತಿಯೂ ಸಾಕಷ್ಟು ಬದಲಾಗಿದೆ. ಮಕ್ಕಳಿಗೆ ದಂಡಿಸದೆ, ಶಿಕ್ಷಿಸದೆ ಪಾಠ ಮಾಡಬೇಕು ಎಂದು ಪಾಲಕರೆ ತಾಕೀತು ಮಾಡುತ್ತಾರೆ. ನಾವು ನಿಮಗೆಲ್ಲ ಹೊಡೆದು ಬಡಿದು ಪಾಠ ಬೋಧನೆ ಮಾಡಿರುವುದರಿಂದ ಸಮಾಜದಲ್ಲಿ ಸಂಸ್ಕಾರ ಜೀವನ ಕಟ್ಟಿಕಕೊಂಡಿದ್ದೀರಿ ಹಲವಾರು ವರ್ಷಗಳ ನಂತರ ನಿಮ್ಮನ್ನು ಮತ್ತೆ ನೋಡಿದ್ದು ಸಂತೋಷವಾಯಿತು ಎಂದರು.
ನಿವೃತ್ತ ಹಿಂದಿ ಶಿಕ್ಷಕ ವೀರೇಶಪ್ಪ ಡಿ ಕೆ ಮಾತನಾಡಿ, ನಮ್ಮ ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರವಾದದು. ಅದರಂತಯೆ ನಾವುಗಳು ಉತ್ತಮ ರೀತಿಯಲ್ಲಿ ಮಕ್ಕಳಿಗೆ ಪಾಠ ಬೋಧನೆ ಮಾಡಿದಾಗ ನಮ್ಮ ಹೆಸರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆಳವಾಗಿ ಬೇರೂರಲು ಸಾಧ್ಯವಾಗುತ್ತದೆ. ಕೇವಲ ಪ್ರತಿಭಾನ್ವಿತ ಹಾಗೂ ಕಲಿಕೆಯಲ್ಲಿ ಮುಂದಿರುವ ಮಕ್ಕಳಿಗೆ ಪಾಠ ಬೋಧನೆಗೆ ಹೆಚ್ಚು ಹೊತ್ತು ನೀಡದೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸರಳವಾಗಿ ಅವರದೇ ಆದ ಭಾಷೆಯಲ್ಲಿ ಪಾಠ ಬೋಧನೆ ಮಾಡಿದರೆ ಸುಲಭವಾಗಿ ಅರ್ಥೈಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಂದಿನ ಮಕ್ಕಳಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳಿಲ್ಲದೆ ತಮ್ಮ ಮನೆಯ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ಶಿಕ್ಷಣ ಪಡೆಯುತ್ತಿದ್ದರು. ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಕಲಿಕೆ ಉತ್ತಮ ವಾಗಿಸಲು ಪ್ರತಿಯೊಬ್ಬರೂ ಕಾಳಜಿ ವಹಿಸುತ್ತಿದ್ದರು. ಆದರೆ ಇಂದಿನ ಶಿಕ್ಷಕರು ಸರ್ಕಾರ ಸೂಚಿಸಿರುವ ನಿಬಂಧನೆಗಳಂತೆ ಶಿಕ್ಷಣ ನೀಡಬೇಕಾಗಿದೆ ಎಂದರು.
ಹಳೆಯ ವಿದ್ಯಾರ್ಥಿ ಚಂದ್ರಪ್ಪ ಬಿ ಮಾತನಾಡಿ, ಪಾಠ ಹೇಳಿ ಜ್ಞಾನಾರ್ಜನೆ ಮಾಡಿಸಿ ಬದುಕಿಗೆ ಬೆಳಕಾದ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಪ್ರತ್ಯಕ್ಷವಾಗಿ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕದ ಕಾರ್ಯ, ಯಾವುದೇ ಅಪೇಕ್ಷೆ ಇಲ್ಲದೆ ನಮ್ಮ ಭವಿಷ್ಯ ರೂಪಿಸಿದ್ದಾರೆ ಎಂದರು.
ಹಳೆಯ ವಿದ್ಯಾರ್ಥಿಗಳಾದ ಒ ರಮೇಶ, ಪ್ರಶಾಂತ, ಉತ್ತಪ್ಪ ಬಣಕಾರ, ಪ್ರಕಾಶ್ ಟಿ , ಕರಿಬಸವರಾಜ, ಎಚ್ ಎಂ ಕೊಟ್ರಯ್ಯ, ರಘುವೀರ, ಆನಂದ, ಬಸವರಾಜ, ಸವಿತಾ ಎ, ಚಂದ್ರಮ್ಮ, ಶಶಿಕಲಾ, ವೈಶಾಲಿ, ಭಾಗ್ಯ ಇತರರಿದ್ದರು.