ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು

h4-b.y.vijayendra
Published on

ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ 51ನೇ ಜನ್ಮದಿನ ನಿಮಿತ್ತ ಬಿಜೆಪಿ ಯುವ ಮುಖಂಡ, ವಿಎಕೆ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಕಾಟವೆ ನೇತೃತ್ವದಲ್ಲಿ ನಗರದ ಗಣೇಶ ಪೇಟೆಯ ಸರ್ಕಾರಿ ನಂ. 7 ಹಾಗೂ ನಂ. 8 ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಸುಮಾರು ಐದುನೂರಕ್ಕಿಂತ ಹೆಚ್ಚು ಮಕ್ಕಳಿಗೆ ಮಂಗಳವಾರ ಬ್ಯಾಗ್ ಹಾಗೂ ಪರೀಕ್ಷೆ ಕಿಟ್‌ಗಳನ್ನು ವಿತರಿಸಲಾಯಿತು.

ನಂತರ ಮಾತನಾಡಿದ ವೆಂಕಟೇಶ ಕಾಟವೆ, ಇಂದಿನ ಮಕ್ಕಳು ಮುಂದಿನ ಪ್ರಜೆಗಳು. ಗುರುವಿನ ಮಾರ್ಗದಲ್ಲಿ ತಮ್ಮ ತಂದೆ -ತಾಯಿಯ ಕನಸನ್ನು ಸಾಕಾರಗೊಳಿಸಬೇಕು ಎಂದು ಸಲಹೆ ನೀಡಿದರಲ್ಲದೆ, ಬಿ.ವೈ. ವಿಜಯೇಂದ್ರ ಅವರಿಗೆ ಮಕ್ಕಳೆಂದರೆ ಬಲು ಪ್ರೀತಿ. ಹಾಗಾಗಿ ಅವರ ಜನ್ಮದಿನದ ಪ್ರಯುಕ್ತ ನಮ್ಮ ಫೌಂಡೇಷನ್ ವತಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಬಿ.ವೈ. ವಿಜಯೇಂದ್ರ ಅವರು ರಾಜ್ಯಾದ್ಯಂತ ಬಿಜೆಪಿ ಪಕ್ಷವನ್ನು ಚಾಣಾಕ್ಷತನದಿಂದ ಸಂಘಟಿಸುತ್ತಿದ್ದಾರೆ. ಈ ಮೂಲಕ ಹೊಸ ಆಯಾಮ ನೀಡಿ ಯಶಸ್ಸಿನ ಶಿಖರ ತಲುಪಿಸಿದ್ದಾರೆ. ವಿಜಯೇಂದ್ರ ಅವರಿಗೆ ದೇವರು ಸದಾ ಯಶಸ್ಸು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಎಂಎಸ್‌ಐಎಲ್ ಮಾಜಿ ನಿರ್ದೇಶಕ ತೋಟಪ್ಪ ನೀಡಗುಂದಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಭು ನವಲಗುಂದಮಠ, ಪ್ರಾಂಶುಪಾಲೆ ಎಸ್.ಎಸ್. ಹೂಗಾರ, ಶಿಕ್ಷಕರಾದ ಎನ್.ಜಿ. ಕಟಾನೆ, ಜೆ.ಎನ್. ನಾಯಕ, ಲತಾ ಆಚಾರ್ಯ, ಜೆ.ಎನ್. ಪುಟ್ಟಪ್ಪನವರ, ಆರ್.ಕೆ. ಅನಗೋಳ, ಎಸ್.ಸಿ. ನದಾಫ್, ವರ್ಷಾ ಪತ್ತೇದ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಶೆಟ್ಟರ್, ಬಿಜೆಪಿ ಪೂರ್ವ ಕ್ಷೇತ್ರ ಮಂಡಲದ ಪ್ರಧಾನ ಕಾರ್ಯದರ್ಶಿ ರಂಗಾ ಕಠಾರೆ, ಬಿಜೆಪಿ ಬೂತ್ ಅಧ್ಯಕ್ಷ ರಾಜು ಮೇಲಿನಮನಿ, ರಂಗಸ್ವಾಮಿ, ದಯಾನಂದ ಚವ್ಹಾಣ, ನಾಗರತ್ನಾ ಬಳ್ಳಾರಿ, ಬಾಬುಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net