

ಕಲಾದಗಿ: ಸ್ಥಳಿಯ ಶ್ರೀ ಸಾಯಿಮಂದಿರದಲ್ಲಿ ಏ.12ರಂದು ಭಗವದ್ಗೀತಾ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಸಂಜೆ 6.30 ಕ್ಕೆ ಆರಂಭವಾಗುವ ಪ್ರವಚನದಲ್ಲಿ ಖ್ಯಾತ ಪ್ರವಚನಕಾರರಾದ ಕೃಷ್ಣ ಶಾಸಿಗಳು ಕುರಿತು ಪ್ರವಚನವನ್ನು ನೀಡಲಿದ್ದಾರೆ. ಸಂಜೆ 5.30ಕ್ಕೆ ಚಿಕ್ಕಸಂಶಿಯ ಕೃಷ್ಣಾ ಪತ್ತರಾ ನೇತೃತ್ವದ ಭಜನಾ ಮಂಡಳಿಯವರಿಂದ ಭಜನೆ ನೆರವೇರಲಿದೆ.
ಗ್ರಾಮದ ಆನಂದ ವಾಘ ಹಾಗೂ ಹುಬ್ಬಳ್ಳಿಯ ಎ.ಎಸ್.ಚವ್ಹಾಣಅವರು ಪ್ರಸಾದದ ವ್ಯವಸ್ಥೆ ಮಾಡಲಿದ್ದಾರೆ.
ಎಲ್ಲರು ಸರಿಯಾದ ಸಮಯಕ್ಕೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಕೋರಿದ್ದಾರೆ.