ಇಂದು, ನಾಳೆ ತುಪ್ಪೂರಲ್ಲಿ ಸುಗ್ಗಿಹಬ್ಬ

bhr beeru
ಬಾಳೆಹೊನ್ನೂರು ಸಮೀಪದ ಬೈರನಮಕ್ಕಿ ಸಿದ್ದೇಶ್ವರ ಗಣಂಗಳು ದೇವರು ಹಾಗೂ ಪರಿವಾರ ದೇವರ ವಾರ್ಷಿಕ ಸುಗ್ಗಿಹಬ್ಬ ನಡೆಯಿತು.
Published on

ಬಾಳೆಹೊನ್ನೂರು: ತುಪ್ಪೂರು ಗ್ರಾಮದ ಬಿರೇಕಲ್ಲು ಭೂತೇಶ್ವರ ಸ್ವಾಮಿ ಹಾಗೂ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕ ಸುಗ್ಗಿಹಬ್ಬ ಮೇ 18, 19ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಮಂಜುನಾಥ್ ತುಪ್ಪೂರು ತಿಳಿಸಿದ್ದಾರೆ. 18ರಂದು ರಾತ್ರಿ ಧಾರ್ಮಿಕ ಕೈಂಕರ್ಯಗಳೊಂದಿಗೆ ಸುಗ್ಗಿ ಉತ್ಸವ ಪ್ರಾರಂಭಗೊಳ್ಳಲಿದ್ದು, 19ರ ಬೆಳಗ್ಗೆ 7 ಗಂಟೆಯಿಂದ ನಿರಂತರವಾಗಿ ಸುಗ್ಗಿಹಬ್ಬ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇನ್ನು ಬೈರನಮಕ್ಕಿ ಸಿದ್ದೇಶ್ವರ ಗಣಂಗಳು ದೇವರು, ಭೂತಪ್ಪ , ಚೌಡೇಶ್ವರಿ ದೇವಿ ಹಾಗೂ ಪರಿವಾರ ದೇವರ ವಾರ್ಷಿಕ ಸುಗ್ಗಿಹಬ್ಬ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net