

ಮೂಡಲಗಿ: ಪಟ್ಟಣದಲ್ಲಿ 2ನೇ ಬಾರಿಗೆ ಮಾರ್ನಿಂಗ್ ಸ್ಟಾರ್ ಕ್ರಿಕೆಟರ್ಸ್ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಆರು ತಂಡಗಳಿಂದ ಮೂಡಲಗಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯ ನ.6 ರಿಂದ 10ರ ವರೆಗೆ ಮೂಡಲಗಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಮೂಡಲಗಿ ಲಯನ್ಸ್ ಕ್ಲಬ್ ಸದಸ್ಯ ಶಿವಾನಂದ ಗಾಡವಿ ತಿಳಿಸಿದರು.
ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಪಂದ್ಯಾವಳಿಯ ಪ್ರಚಾರ ಪ್ರತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು, ವಿಜೇತರಿಗೆ ಜೆಡಿಎಸ್ ಜಿಲ್ಲಾ ಮಾಜಿ ಉಪಾಧ್ಯಕ್ಷ ಪ್ರಕಾಶ ಸೋನವಾಲ್ಕರ್ ಪ್ರಥಮ ಬಹುಮಾನವಾಗಿ 50 ಸಾವಿರ ರೂ., ಶಿಕ್ಷಣಪ್ರೇಮಿ ಮಲ್ಲಪ್ಪ ಸೋನವಾಲ್ಕರ್ ಸ್ಮರಣಾರ್ಥ ಸಂದೀಪ ಸೋನವಾಲ್ಕರ್ ದ್ವಿತೀಯ ಬಹುಮಾನವಾಗಿ 30 ಸಾವಿರ ರೂ., ಶಿವರಾಯಪ್ಪ ಕಂಕಣವಾಡಿ ಸ್ಮರಣಾರ್ಥ ಹನಮಂತ ಮತ್ತು ಹೇಮಂತ ಕಂಕಣವಾಡಿ ತತೀಯ ಬಹುಮಾನವಾಗಿ 20 ಸಾವಿರ ರೂ. ಹಾಗೂ ಟ್ರೋಫಿ ನೀಡಲಿದ್ದಾರೆ ಎಂದು ತಿಳಿಸಿದರು.
ಸನೀತ ಸೋನವಾಲ್ಕರ್ ಮಾತನಾಡಿದರು. ಸೋಮು ಮಠಪತಿ, ಗಿರೀಶ ಮೇತ್ರಿ, ಮಲ್ಲು ಕುರುಬಗಟ್ಟಿ, ವಿಶ್ವನಾಥ ಬೆಲ್ಲದ, ಶಿವಬೋಧ ಯರಜರವಿ, ಕಷ್ಣ ಕೆಂಪಸತ್ತಿ, ರವಿ ಪತ್ತಾರ, ಉಸ್ಮಾನ್ ಆಲಿಯಾ, ಶೇಖರಯ್ಯ ಹಿರೇಮಠ, ಪ್ರವೀಣ ಕುರುಬಗಟ್ಟಿ, ಲಕ್ಕಪ್ಪ ತಳವಾರ ಇತರರಿದ್ದರು.