

ವಿಜಯಪುರ : ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಜ.11 ರಂದು ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಜ.11 ರಂದು ಬೆಳಗ್ಗೆ 10.30ಕ್ಕೆ ನಗರದ ಸಿದ್ಧೇಶ್ವರ ದೇವಸ್ಥಾನ ಬಳಿಯ ಶಿವಾನುಭವ ಮಂಟಪದಲ್ಲಿ ಕೆಎಸ್ಡಿಎಲ್ ಸಾಬೂನು ಮೇಳ ಉದ್ಘಾಟಿಸುವರು. ಬೆಳಗ್ಗೆ 11ಕ್ಕೆ ಹಳೆ ತಹಸೀಲ್ದಾರ ಕಚೇರಿಯಲ್ಲಿ ತಿಕೋಟಾ ಹಾಗೂ ಬಬಲೇಶ್ವರ ತಾಲೂಕಿನ ಭೂಸುರಾ (ಭೂದಾಖಲೆಗಳ ಗಣಕೀಕರಣ) ಯೋಜನೆಗೆ ಚಾಲನೆ ನೀಡುವರು. ಮಧ್ಯಾಹ್ನ 12ಕ್ಕೆ ನಗರ ಹೊರವಲಯದ ಹಿಟ್ನಳ್ಳಿ ಫಾಮ್ರ್ನಲ್ಲಿ ಕೃಷಿ ಮೇಳ ಉದ್ಘಾಟಿಸುವರು.
ಸಂಜೆ 6ಕ್ಕೆ ಬೆಳಗಾವಿ ಜಿಲ್ಲೆಯ ಅಥಣಿಯ ಮೊಟಗಿ ಮಠದಲ್ಲಿ ಶ್ರೀ ಚನ್ನಬಸವೇಶ್ವರ ಯುವಕ ಸಂದ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾತ್ರಿ 8ಕ್ಕೆ ಅಥಣಿಯಿಂದ ಹೊರಟು ಬೆಳಗಾವಿಯಲ್ಲಿ ವಾಸ್ತವ್ಯ ಮಾಡುವರು.
ಜ.12 ರಂದು ಬೆಳಗ್ಗೆ 8.30ಕ್ಕೆ ಬೆಳಗಾವಿಯಿಮದ ವಿಮಾನ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವರ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.