ಇಂದು ವಾಸವಿ ಜಯಂತಿ ಆಚರಣೆ

Today is Vasavi Jayanti celebration
ಕೆರೂರ ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಕನ್ನಿಕಾ ಪರಮೇಶ್ವರ ದೇವಿಗೆ ಮಂಗಳವಾರ ಸೀರೆ ಹಾಗೂ ತರಕಾರಿಗಳಿಂದ ಅಲಂಕಾರ ಮಾಡಿರುವುದು.
Published on

ಕೆರೂರ: ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಮೇ 7ರಂದು ವಾಸವಿ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ ಕನ್ನಿಕಾ ಪರಮೇಶ್ವರಿಗೆ ದೇವಿಗೆ ಕ್ಷೀರಾಭೀಷೇಕ, ಪಂಚಾಮೃತ ಅಭಿಷೇಕ ಮತ್ತು ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ. ಆಲದಕಟ್ಟಿ ಗಣಪತಿ ದೇವಸ್ಥಾನದಿಂದ ನಗರೇಶ್ವರ ದೇವಸ್ಥಾನದ ವರೆಗೆ ಮಹಿಳೆಯರ ಕುಂಭ ಮೇರವಣಿಗೆ ನಡೆಲಿದ್ದು, ಬೆಳಗ್ಗೆ 10.30ಕ್ಕೆ ದೇವಸ್ಥಾನದಲ್ಲಿ ವಾಸವಿ ಜಯಂತಿ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.

ಸಂಜೆ 7 ಗಂಟೆಗೆ ಹೊಸಪೇಟಿ ಬಡಾವಣೆಯಿಂದ ನಗರೇಶ್ವರ ದೇವಸ್ಥಾನದವರೆಗೆ ಕೊಣ್ಣೂರ ತಂಡದಿಂದ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ನಡೆಯಲಿದೆ ಎಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಧನಂಜಯ ಕಂದಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net